ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡ್ತಾರಂತೆ ಶ್ರದ್ಧಾ

ಮಂಗಳವಾರ, 10 ಮೇ 2016 (11:40 IST)
ತನ್ನ ಮೊದಲ ಸಿನಿಮಾದ ಮೂಲಕವೇ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಭರವಸೆ ಮೂಡಿಸಿದ ನಟಿ ಶ್ರದ್ಧಾ ಕಪೂರ್. ಆ ಬಳಿಕ ಶ್ರದ್ಧಾ ಕಪೂರ್ ಅವರು ಹಿಂತಿರುಗಿ ನೋಡಲೇ ಇಲ್ಲ. ಒಂದಿಲ್ಲೊಂದು ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಬಂದಿದ್ದಾರೆ.


ಇದೀಗ ಶ್ರದ್ಧಾ ಕಪೂರ್ ಅವರು ನಾನು ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋ ಆಸೆಯನ್ನು ಹೊರ ಹಾಕಿದ್ದಾರೆ.

ಬಾಲಿವುಡ್ ನ ಹೆಚ್ಚಿನ ನಟ ನಟಿಯರಿಗೆ ನಾನು ಇಂತಹ ನಿರ್ದೇಶಕ , ನಿರ್ಮಾಪಕರ ಸಿನಿಮಾದಲ್ಲಿ ಕೆಲಸ ಮಾಡಬೇಕು ಅನ್ನೋ ಆಸೆ ಇದೆ ಇರುತ್ತೆ. ಕೆಲವರ ಈ ಆಸೆ ಈಡೇರಿದ್ರೆ ಕೆಲವರಿಗೆ ಹಾಗೇ ಉಳಿದಿರುತ್ತೆ.
 
ಸದ್ಯ ಮೊನ್ನೆಯಷ್ಟೇ ರಿಲೀಸ್ ಆದ ತಮ್ಮ ಬಾಘೀ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟಿ ಶ್ರದ್ಧಾ ಕಪೂರ್ ಅವರು ನಾನು ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋ ಆಸೆ ಹೊರ ಹಾಕಿದ್ದಾರೆ.
 
ನಾನು ತುಂಬಾ ದಿನಗಳಿಂದ ಅವರ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋ ಕನಸು ಕಾಣುತ್ತಿದ್ದೇನೆ.ಅದು ಆಗುತ್ತೆ ಅನ್ನೋ ನಂಬಿಕೆ ನನಗಿದೆ. ನಾನು ಅವರ ಸಿನಿಮಾಗಳನ್ನು ತುಂಬಾನೇ  ಇಷ್ಟಪಡುತ್ತೇನೆ ಅಂತಾ ಶ್ರದ್ಧಾ ಕಪೂರ್ ಅವರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ