ಕರಣ್ ಜೋಹರ್ ಬೆಂಬಲಕ್ಕೆ ಶ್ಯಾಮ್ ಬೆನಗಲ್

ಗುರುವಾರ, 20 ಅಕ್ಟೋಬರ್ 2016 (09:07 IST)
ಮುಂಬೈ: ಸಂಕಷ್ಟದಲ್ಲಿರುವ “ಏ ದಿಲ್ ಹೇ ಮುಷ್ಕಿಲ್” ಚಿತ್ರದ ನಿರ್ಮಾಪಕ ಕರಣ್ ಜೋಹರ್ ಬೆಂಬಲಕ್ಕೆ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ನಿಂತಿದ್ದಾರೆ.

ಕರಣ್ ಜೋಹರ್ ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸಬೇಕಾಗಿ ಬಂದಿರುವುದು ವಿಷಾಧನೀಯ ಎಂದು ಅವರು ಹೇಳಿದ್ದಾರೆ. ಇದೇ ದೇಶದಲ್ಲಿ ಯಶಸ್ಸು ಕಂಡು, ಇದೇ ದೇಶದಲ್ಲಿ ಜೀವನ ಮಾಡುತ್ತಿರುವವ ಕರಣ್. ಆತ ದೇಶ ಬಿಟ್ಟು ಎಲ್ಲಿಗೂ ಓಡಿಹೋಗುತ್ತಿಲ್ಲ. ಆತನಂತಹ ವ್ಯಕ್ತಿ ತನ್ನ ದೇಶಪ್ರೇಮವನ್ನು ಸಾಬೀತುಪಡಿಸುವಂತಹ ಪರಿಸ್ಥಿತಿ ಯಾಕೆ ಸೃಷ್ಟಿಯಾಗುತ್ತದೆ? ಎಂದು 81 ವರ್ಷದ ಹಿರಿಯ ನಿರ್ದೇಶಕ ಪ್ರಶ್ನಿಸಿದ್ದಾರೆ.

“ಏ ದಿಲ್ ಹೇ ಮುಷ್ಕಿಲ್” ಚಿತ್ರ ಈ ವಾರಾಂತ್ಯ ಬಿಡುಗಡೆಯಾಗಲಿದ್ದು, ಪಾಕಿಸ್ತಾನ ಕಲಾವಿದನೊಬ್ಬ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ನಿಷೇಧದ ಭೀತಿಯಲ್ಲಿದೆ. ಅಲ್ಲದೆ ಚಿತ್ರ ಪ್ರದರ್ಶನ ಮಾಡದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಬೆದರಿಕೆ ಹಾಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ