ಕಿರುತೆರೆಗೆ ಬರುತ್ತಿದ್ದಾರೆ ದೂದ್ ಪೇಡಾ ದಿಗಂತ್

ಶುಕ್ರವಾರ, 20 ಮೇ 2016 (12:22 IST)
ಕಿರುತೆರೆ ಕಲಾವಿದರು ಬೆಳ್ಳಿತೆರೆಯಲ್ಲಿ ಮಿಂಚೋದು, ಬೆಳ್ಳಿತೆರೆಯ ಕಲಾವಿದರು ಕಿರುತೆರೆಗೆ ಬರೋದು ಸ್ಯಾಂಡಲ್ ವುಡ್ ನಲ್ಲಿ ಹೊಸದೇನಲ್ಲ. ಈಗಾಗಲೇ ಅನೇಕ ಕಿರುತೆರೆ ಕಲಾವಿದರು ಬೆಳ್ಳಿತೆರೆಗೆ ಬಂದು ಅಲ್ಲಿಯೂ ಸಾಕಷ್ಟು ಹೆಸರುಗಳನ್ನು ಮಾಡುತ್ತಿದ್ದಾರೆ. 
ಇನ್ನು ಬೆಳ್ಳಿತೆರೆಯ ಕಲಾವಿದರಿಗೂ ಕಿರುತೆರೆಯಲ್ಲಿ ಉತ್ತಮ ರೆಸ್ಪಾನ್ ಸಿಕ್ಕಿದೆ. ಇದೀಗ ಸ್ಯಾಂಡಲ್ ವುಡ್ ನ ಮುದ್ದು ಹುಡುಗ ದೂದ್ ಪೇಡಾ ದಿಗಂತ್ ಕಿರುತೆರೆಗೆ ಬರಲು ರೆಡಿಯಾಗಿದ್ದಾರೆ.
 
ಅಂದ್ಹಾಗೆ ದಿಗಂತ್ ಅವರು ಕಿರುತೆರೆಗೆ ಬರುತ್ತಿರೋದು ಯಾವುದೋ ಧಾರಾವಾಹಿಯಲ್ಲಿ ಅಭಿನಯಿಸೋದಕ್ಕೆ ಅಲ್ಲ. ಅವರು ಡ್ಯಾನ್ಸ್ ಕಾರ್ಯಕ್ರಮವೊಂದರ ಜಡ್ಜ್ ಆಗಿ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅಂದ್ಹಾಗೆ ಝೀ ಕರ್ನಾಟಕದಲ್ಲಿ ಆರಂಭವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 
 
ಇನ್ನು ಇವರ ಜೊತೆ  ನಟಿ ಮಾಲಾಶ್ರೀ ಹಾಗೇ ಭಾವನಾ ಅವರು ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
 
ಅಂದ್ಹಾಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋವನ್ನು ಇದೇ ಮೊದಲ ಬಾರಿಗೆ ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವನ್ನು ಮಾಡುತ್ತಿದ್ದು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇದಕ್ಕೆ ಆಡಿಷನ್ ಗಳನ್ನು ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವಾರಾಂತ್ಯಕ್ಕೆ 7-30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ