ಮುಂಬೈ : ನಟಿ ಕಂಗನಾ ರಾಣೌತ್ ನಟಿಸುತ್ತಿರುವ 'ಮಣಿಕರ್ಣಿಕಾ ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಶೂಟಿಂಗ್ ಮುಗಿಯುವ ಮೊದಲೆ ಇದೀಗ ಈ ಚಿತ್ರತಂಡದಲ್ಲಿ ವಿವಾದವೊಂದು ಶುರುವಾಗಿದೆ.
ಹೌದು. ಮಣಿಕರ್ಣಿಕಾ ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡಬೇಕು ಅಂತ ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ. ಆದರೆ ಚಿತ್ರದ ನಿರ್ದೇಶಕ ಕ್ರಿಶ್ ಇದೀಗ ಈ ಚಿತ್ರ ಬಿಟ್ಟು 'ಎನ್.ಟಿ.ಆರ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.
ಆದಕಾರಣ ನಿರ್ಮಾಪಕರು ಈ ಚಿತ್ರವನ್ನು ನಿರ್ದೇಶನ ಮಾಡಲು ನಟಿ ಕಂಗನಾ ರಣೌತ್ ಅವರಿಗೆ ಹೇಳಿದ್ದಾರೆ. ಈ ಜವಬ್ದಾರಿಯನ್ನು ತೆಗೆದುಕೊಂಡ ನಟಿ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡುವುದರ ಜೊತೆಗೆ ಕೆಲ ಸೀನ್ ಗಳನ್ನ ರೀ ಶೂಟ್ ಮಾಡಲು ನಿರ್ಧಾರ ಮಾಡಿದ್ದಾರೆ.
ನಟಿ ಕಂಗನಾ ಅವರ ಈ ನಿರ್ಧಾರದಿಂದ ಕೋಪಗೊಂಡ ನಟ ಸೋನು ಸೂದ್ ಚಿತ್ರತಂಡದಿಂದ ಹೊರಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ