ಕೆಎಲ್ ರಾಹುಲ್-ಅಥಿಯಾ ಮದುವೆ ಸುದ್ದಿ ಬಗ್ಗೆ ಸುನಿಲ್ ಶೆಟ್ಟಿ ಪ್ರತಿಕ್ರಿಯೆ
ರಾಹುಲ್ ಮತ್ತು ಅಥಿಯಾ ಮೂರು ತಿಂಗಳೊಳಗಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂಬೈನಲ್ಲಿ ಮದುವೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ರಾಹುಲ್ ಪೋಷಕರು ಮುಂಬೈಗೆ ಬಂದು ಸುನಿಲ್ ಶೆಟ್ಟಿ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಶೆಟ್ಟಿ, ಮದುವೆ ಬಗ್ಗೆ ಯಾವುದೇ ಪ್ಲ್ಯಾನ್ ಮಾಡಲಾಗಿಲ್ಲ. ಇದೆಲ್ಲಾ ರೂಮರ್ ಅಷ್ಟೇ ಎಂದಿದ್ದಾರೆ.