ಕೆಎಲ್ ರಾಹುಲ್-ಅಥಿಯಾ ಮದುವೆ ಬಗ್ಗೆ ಹೀಗೊಂದು ಗುಸು ಗುಸು!
ಇದೀಗ ಈ ಜೋಡಿ ಜೀವಗಳು ಮುಂದಿನ ಮೂರು ತಿಂಗಳ ಬಳಿಕ ಮದುವೆಯಾಗಲಿರುವುದಾಗಿ ಸುದ್ದಿಯೊಂದು ಹರಿದಾಡುತ್ತಿದೆ.
ಸದ್ಯಕ್ಕೆ ಕೆಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಅವರ ಜೊತೆಗೆ ಅಥಿಯಾ ಕೂಡಾ ವಿದೇಶಕ್ಕೆ ತೆರಳಿದ್ದರು. ಇತ್ತೀಚೆಗೆ ರಾಹುಲ್ ತಂದೆ-ತಾಯಿ ಸುನಿಲ್ ಶೆಟ್ಟಿ ಕುಟುಂಬಸ್ಥರನ್ನು ಮುಂಬೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರಂತೆ. ಹೀಗಾಗಿ ಮುಂದಿನ ಮೂರು ತಿಂಗಳೊಳಗಾಗಿ ಮುಂಬೈನಲ್ಲಿ ಮದುವೆ ನಡೆಯಲಿದೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.