ನೀಲಿ ಚಿತ್ರಗಳಿಂದ ಬಾಲಿವುಡ್ಗೆ ಅಡಿಯಿಟ್ಟ ಸನ್ನಿ ಲಿಯೋನ್ ಈಗ ನಂಬರ್ ಒನ್ ಪಟ್ಟಕ್ಕೇರುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ಅವರ ತಮ್ಮನ ಮದುವೆ ಲಾಸ್ ಏಂಜಲೀಸ್ನಲ್ಲಿ ನಡೆಯಿತು. ಸನ್ನಿ ಸಹೋದರ ಸಂದೀಪ್ ಮೆಹ್ರಾ ಮತ್ತು ದಕ್ಷಿಣದ ವಧು ಕರಿಷ್ಮಾ ನಾಯ್ಡು ಅವರನ್ನು ವರಿಸಿದ್ದಾರೆ.
ಈ ವಿವಾಹಕ್ಕೆ ಸನ್ನಿ ತನ್ನ ಪತಿ ಡಾನಿಯಲ್ ಜೊತೆ ಆಗಮಿಸಿ ನೂತನ ವಧುವರರನ್ನು ಆಶೀರ್ವದಿಸಿದರು. ಸಿಖ್ ಮತ್ತು ತಮಿಳು ಸಂಪ್ರದಾಯದಂತೆ ಮದುವೆ ನೆರವೇರಿತು.
ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸ್ವತಃ ಸನ್ನಿ ಮೈಕ್ರೋ ಬ್ಲಾಗಿಂಗ್ ಸೈಟ್ಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕುಟುಂಬ ಸದಸ್ಯರೆಲ್ಲಾ ಇದ್ದೀವಿ ಎಂದಿದ್ದಾರೆ. ವಿಶೇಷ ಎಂದರೆ ಎಲ್ಲರೂ ಭಾರತೀಯ ಸಂಪ್ರದಾಯದಲ್ಲಿ ಬಟ್ಟೆ ತೊಟ್ಟಿದ್ದಾರೆ.
ಸನ್ನಿ ಲಿಯೋನ್ ಎಂದ ಕೂಡಲೆ ಹಾಟ್, ಅರೆನಗ್ನ ಫೋಟೋಗಳು ಕಣ್ಣಮುಂದೆ ಬರುತ್ತವೆ. ಆದರೆ ಇಲ್ಲಿ ಸನ್ನಿ ಲಿಯೋ ಸಾಂಪ್ರದಾಯಿಕ ವಸ್ತ್ರ ತೊಟ್ಟು ಎಲ್ಲರಿಗೂ ಶಾಕ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.