ವಿಶೇಷವಾದವರ ಜೊತೆಗೆ ಹೊಸ ಮನೆಗೆ ಪ್ರವೇಶ ಮಾಡಿದ ನಟಿ ಸನ್ನಿಲಿಯೋನಾ

ಶನಿವಾರ, 15 ಸೆಪ್ಟಂಬರ್ 2018 (06:22 IST)
ಮುಂಬೈ : ಎಲ್ಲಾ ಚಿತ್ರರಂಗಗಳು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಬಾಲಿವುಡ್ ನಟಿ ಸನ್ನಿಲಿಯೋನಾ ಅವರಿಗೆ ಗಣೇಶ ಹಬ್ಬದ ದಿನ ತುಂಬಾ ವಿಶೇಷವಾಗಿದೆ.


ಹೌದು. ಗಣೇಶನ ಆರಾಧನೆಯ ದಿನದಂದು ಬಾಲಿವುಡ್​ ನಟಿ ಸನ್ನಿ ಲಿಯೋನ್​​ ಗಣೇಶನ ಜೊತೆಯಲ್ಲೇ ಹೊಸಮನೆಗೆ ಪ್ರವೇಶ ಮಾಡಿದ್ದಾರೆ. ಮುಂಬೈ ನಗರದಲ್ಲಿರುವ ಐಷಾರಾಮಿ ಅಪಾರ್ಟ್​ಮೆಂಟ್​ನಲ್ಲಿರುವ ಮನೆಯಲ್ಲಿ ಇನ್ನುಮುಂದೆ ಸನ್ನಿ ಕುಟುಂಬ ವಾಸಿಸಲಿದೆ.


ಈ ಖುಷಿಯನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಲಾರ್ಡ್​ ಗಣೇಶನ ಜತೆ ಹೊಸ ಮನೆಗೆ ಪ್ರವೇಶ ಮಾಡಿದ್ದೇನೆ ಎಂದಿದ್ದಾರೆ.  ಇದೇ ವೇಳೆ ಅವರು ಎಲ್ಲರಿಗೂ ಗಣೇಶ್​ ಹಬ್ಬದ ಶುಭಾಶಯ ಕೋರಿರುವ ಅವರು ದೇವರು ಒಳ್ಳೆಯದನ್ನ ಮಾಡಲಿ ಎಂದು ಆಶಿಸಿದ್ದಾರೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ