ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ವರ್ಕ್‍ಔಟ್

ಸೋಮವಾರ, 23 ಜನವರಿ 2017 (12:06 IST)
ಭಾರತದಲ್ಲಿ ಈಗ ಮೋಸ್ಟ್ ಕ್ರೇಜಿ ಸೆಲೆಬ್ರಿಟಿ ಯಾರೆಂದರೆ...ಹೆಚ್ಚಿನ ಮಂದಿ ಕೊಡುವ ಉತ್ತರ ಒಂದೇ ಸನ್ನಿ ಲಿಯೋನ್. ಈಕೆ ಅಭಿನಯಿಸಿದ ಸಿನಿಮಾಗಳು ಕಡಿಮೆ ಇದ್ದರೂ ಭಾಷೆ, ರಾಜ್ಯದೊಂದಿಗೆ ಯಾವುದೇ ಸಂಬಂಧ ಇಲ್ಲದಂತೆ ಯುವಕರ ಪಾಲಿಗೆ ರೊಮ್ಯಾಂಟಿಕ್ ಅಪ್ಸರೆ. 
 
ಗೂಗಲ್ ಸರ್ಚ್ ನಲ್ಲಿ ಸಹ ಭಾರತದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆಂದರೆ ಸನ್ನಿ ಲಿಯೋನ್ ಯಾವ ಸ್ಥಾನದಲ್ಲಿದ್ದಾರೋ ನೀವೇ ಊಹಿಸಿ. ಇತ್ತೀಚೆಗೆ ಸನ್ನಿ ಲಿಯೋನ್ ವರ್ಕಔಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. 
 
ಸನ್ನಿ ಲಿಯೋನ್ ವಿಡಿಯೋ ಕಾಣಿಸಿದರೆ ಸಾಕು ಲಕ್ಷ, ಕೋಟಿಗಳಲ್ಲೇ ಕ್ಲಿಕ್ಸ್ ಬರುತ್ತವೆ. ವರ್ಕ್‌ಔಟ್ ವಿಡಿಯೋಗಿಂತಲೂ ಮುಂಚೆ ಶಾರುಖ್ ಖಾನ್ ಜತೆ ರಯೀಸ್ ಚಿತ್ರದಲ್ಲಿ ಲೈಲಾ ಮೈ ಲೈಲಾ ಹಾಡು ಯೂಟ್ಯೂಬಲ್ಲಿ ಬಿಡುಗಡೆಯಾಗಿತ್ತು. ನಾಲ್ಕು ವಾರಗಳಲ್ಲೇ ಆ ವಿಡಿಯೋವನ್ನು ಏಳುವರೆ ಕೋಟಿ ಮಂದಿ ವೀಕ್ಷಿಸಿದ್ದರು. ಇನ್ನು ವರ್ಕ್‌ಔಟ್ ವಿಡಿಯೋ ಸಹ ಎಷ್ಟು ಕೋಟಿಗೆ ವರ್ಕ್‌ಔಟ್ ಆಗುತ್ತದೆ ಎಂಬುದನ್ನು ನೋಡಬೇಕು. ಸನ್ನಿ ಲಿಯೋನ್ ವರ್ಕ್ ಔಟ್ ವಿಡಿಯೋ ಇಲ್ಲಿದೆ ನೋಡಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ