ಕೃತಿ ಸನೋನ್ ಸುಶಾಂತ್ ಸಿಂಗ್ ರಜಪೂತ್ ಅವರ ಮುಖಕ್ಕೆ ಹೊಡೆದಿದ್ದ್ಯಾಕೆ?
ಗುರುವಾರ, 28 ಏಪ್ರಿಲ್ 2016 (11:57 IST)
ನಟಿ ಕೃತಿ ಸನೋನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರು ರಾಬ್ತಾ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸುಶಾಂತ್ ಹಾಗೂ ಕೃತಿ ಜೊತೆಯಾಗಿ ಆಕ್ಟ್ ಮಾಡುತ್ತಿದ್ದಾರೆ.ಆದ್ರೆ ಶೂಟಿಂಗ್ ವೇಳೆ ಕೃತಿ ಸುಶಾಂತ್ ಅವರ ಮುಖಕ್ಕೆ ಪಂಚ್ ನೀಡಿದ್ದಾರಂತೆ.
ಅಯ್ಯೋ ಈಕೆಗೇನಾಯ್ತಪ್ಪಾ ಅಂತಾ ಯೋಚಿಸುತ್ತಿದ್ದೀರಾ ಕೃತಿ ಸುಶಾಂತ್ ಅವರಿಗೆ ಹೊಡೆದಿರೋದು ಸಿನಿಮಾ ದೃಶ್ಯವೊಂದರ ರಿಹರ್ಸಲ್ ವೇಳೆ. ಇನ್ನು ಕೃತಿಯಿಂದ ನಾನು ಏಟು ತಿಂದಿರೋದಾಗಿ ಸ್ವತಃ ಸುಶಾಂತ್ ಅವರೇ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಾನು ನನ್ನ ಸಹನಟಿ ಕೃತಿ ಅವರಿಂದ ಸಿನಿಮಾ ದೃಶ್ಯವೊಂದಕ್ಕಾಗಿ ರಿಹರ್ಸಲ್ ಮಾಡುತ್ತಿದ್ದಾಗ ಏಟು ತಿಂದಿದ್ದೇನೆ ಅಂದಿದ್ದಾರೆ.ಅಲ್ಲದೇ ಈ ಸಂಬಂಧ ಫೋಟೋ ಒಂದನ್ನು ಕೂಡ ಅವರು ಶೇರ್ ಮಾಡಿದ್ದಾರೆ.ಇನ್ನು ಫೋಟೋದಲ್ಲಿ ತಾನು ಏಟು ತಿಂದವನಂತೆ ಸುಶಾಂತ್ ಪೋಸ್ ಕೊಟ್ಟಿದ್ರೆ ಕೃತಿ ಐ ಆಮ್ ಸಾರಿ ಅನ್ನೋ ರೀತಿ ಪೋಸ್ ಕೊಟ್ಟಿದ್ದಾರೆ.
ರಾಬ್ತಾ ಸಿನಿಮಾವನ್ನು ದಿನೇಶ್ ವಿಜಯನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಸುಶಾಂತ್ ಹಾಗೂ ಕೃತಿ ಅವರು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರಂತೆ.ಇನ್ನು ಸೆಟ್ ನಲ್ಲಿ ಸುಶಾಂತ್ ಹಾಗೂ ಕೃತಿ ನಡುವೆ ಉತ್ತಮ ಬಾಂಧವ್ಯವಿದೆ ಅಂತಾ ಸಿನಿಮಾ ತಂಡ ಹೇಳಿದೆ.
ತಾಜಾಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ