ಸುಶಾಂತ್ ಸಾವಿನ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಸಾವಿನ ಆಘಾತ!

ಮಂಗಳವಾರ, 16 ಜೂನ್ 2020 (10:21 IST)
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ದುಃಖ ತಡೆಯಲಾಗದೇ ಅವರ ಕುಟುಂಬದಲ್ಲಿ ಇನ್ನೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.


ಸುಶಾಂತ್ ಅಂತ್ಯಕ್ರಿಯೆ ನಿನ್ನೆ ಮುಂಬೈನಲ್ಲಿ ನೆರವೇರುತ್ತಿದ್ದಾಗ ಅವರ ತವರೂರಾದ ಬಿಹಾರದಲ್ಲಿ ಅತ್ತಿಗೆ ಸುಧಾ ದೇವಿ ಎಂಬವರು ಆಘಾತದಿಂದ ಸಾವಿಗೀಡಾಗಿದ್ದಾರೆ.

ಸುಶಾಂತ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದ ಸುಧಾ ದೇವಿ ಅನ್ನ ನೀರು ಸೇವಿಸದೇ ಕಣ್ಣೀರುಡುತ್ತಿದ್ದರು ಎನ್ನಲಾಗಿದೆ. ನಿನ್ನೆ ಸಂಜೆ ಅವರ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಸುಶಾಂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ