ವಾಘಾ ಗಡಿಗೆ ಭೇಟಿ ನೀಡಿದ ನಟಿ ಸುಷ್ಮಿತಾ ಸೇನ್

ಶನಿವಾರ, 18 ಜೂನ್ 2016 (11:54 IST)
ಬಾಲಿವುಡ್ ನಟಿ ಸುಷ್ಮಿತಾ ಸೇನ್ ವಾಘಾ ಗಡಿಗೆ ತೆರಳಿ ದೇಶಭಕ್ತಿ ತೋರಿದ್ದಾರೆ. ಈ ವೇಳೆ ವಾಘಾ ಗಡಿಗೆ ಭೇಟಿ ನೀಡಿರುವ ಅವರು ಅಲ್ಲಿನ ಸೈನಿಕರ ಜತೆಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅಲ್ಲದೇ ಪ್ರಮುಖ ಸ್ಥಳಗಳ ಬಗ್ಗೆ ಹಾಗೂ ವೀರ ಸೇನಾನಿಗಳ ಬಗ್ಗೆ ಶೂಟ್ ಕೂಡ ಮಾಡಿದ್ದಾರೆ ಸುಷ್ಮಿತಾ ಸೇನ್. ಅಬೃುತಸರದಿಂದ 30 ಕಿಲೋ ಮೀಟರ್ ದೂರದಲ್ಲಿದೆ.

ಫೊಟೋ ಕೃಪೆ ಇನ್‌ಸ್ಟಾಗ್ರಾಮ್
ಏಕಾಂತವಾಗಿ ಬಂದ ಸುಷ್ಮಿತಾ ಸೇನ್ ಶಿಸ್ತಿನಿಂದಲೇ ವಾಘಾ ಗಡಿಯಲ್ಲಿರುವ ಪ್ರಮುಖ ಪ್ಲೇಸ್‌ಗಳನ್ನು ಪ್ರಮುಖ ಸೇನಾನಿಗಳ ಶೌರ್ಯದ ಕುರಿತು ಶೂಟ್ ಮಾಡಿದ್ದಾರೆ.  ಇದೇ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಅಭಿಮಾನಿಗಳಿಗಾಗಿ ಸುಷ್ಮತಾ ಸೇನ್ ಫೊಟೋ ಶೇರ್ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.  

ಫೊಟೋ ಕೃಪೆ ಇನ್‌ಸ್ಟಾಗ್ರಾಮ್

ವಾಘಾ ಗಡಿಗೆ ತೆರಳಿದ್ದ ವೇಳೆ ಬಿಎಸ್‌ಎಫ್ ಯೋಧರಿಂದ ಹಾಗೂ ನೆರೆ ಪಾಕಿಸ್ತಾನಿಗರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಅದಕ್ಕಾಗಿ ಬಿಎಸ್‌ಎಫ್ ಯೋಧರಿಗೆ ನನ್ನದಂತು ಸಲಾಮ್ ಎಂದ ಸುಷ್ಮಿತಾ, ನಾನು ಇದೇ ವೇಳೆ ನೆರೆ ರಾಜ್ಯ ಪಾಕಿಸ್ತಾನಕ್ಕೂ 'ಸಲಾಮ್' ತಿಳಿಸಿದೆ. ಅವರಿಂದ ನಮಸ್ತೆ ಎನ್ನುವ ರೆಸ್ಪಾನ್ಸ್ ಸಿಕ್ಕಿದೆ.

ಇದರಿಂದ ನನಗೆ ತುಂಬಾ ಸಂತಸವಾಗಿದ್ದು, ಭವಿಷ್ಯದಲ್ಲಿ ವಾಘಾ ಗಡಿಯಲ್ಲಿ ಶಾಂತಿ ಹಾಗೂ ಸಹೋದರತೆ ಇರಲಿದೆ ಎಂದು ಆಶಿಸುತ್ತೇನೆ ಎಂದು ಸುಷ್ಮಿತಾ ಸೇನ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ