ಸಲ್ಮಾನ್ ಖಾನ್ ಜೊತೆ ನಟಿಸಿದ ಈ ನಟಿಗೆ ಬೆದರಿಕೆಯ ಸಂದೇಶಗಳು ಬರುತ್ತಿವೆಯಂತೆ!

ಭಾನುವಾರ, 8 ಜುಲೈ 2018 (07:01 IST)
ಮುಂಬೈ : ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ ಬಾಲಿವುಡ್ ನ ನಟಿಯೊಬ್ಬರಿಗೆ ಬೆದರಿಕೆಯ ಸಂದೇಶಗಳು ಬರುತ್ತಿವೆ ಎಂಬುದಾಗಿ ತಿಳಿದುಬಂದಿದೆ.


ಹೌದು. ನಟ ಸಲ್ಮಾನ್ ಖಾನ್ ಅವರ 'ವಾಂಟೆಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಆಯೇಷಾ ಟಕಿಯಾ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಆಕೆಯ ಪತಿ ಫರ್ಹಾನ್ ಆಜ್ಮಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ತಮ್ಮ ಒಂದು ಕಾಲದ ಉದ್ಯಮಿ ಪಾಲುದಾರ ಖಾಸಿಫ್ ಖಾನ್ ಎಂಬಾತ ಈ ಕೃತ್ಯವನ್ನು ನಡೆಸುತ್ತಿದ್ದು, ಆತನಿಗೆ ಕೆಲ ಪೊಲೀಸ್ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆಂದು ನಟಿಯ ಪತಿ ಫರ್ಹಾನ್ ಆಜ್ಮಿ ಆರೋಪಿಸಿದ್ದಾರೆ.


ಈ ಹಿನ್ನಲೆಯಲ್ಲಿ ಫರ್ಹಾನ್ ಆಜ್ಮಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯವನ್ನು ಕೋರಿದ್ದಾರೆ ಎಂಬುದಗಿ ತಿಳಿದುಬಂದಿದೆ. ನಟಿಗೆ ವಾಟ್ಸ್ ಆಪ್ ಮೂಲಕ, 'ನೀವು ಮತ್ತು ನಿಮ್ಮ ಪತಿ ಶೀಘ್ರದಲ್ಲೇ ಜೈಲಿನಲ್ಲಿರುತ್ತೀರಿ. ಹತ್ತು ದಿನಗಳಲ್ಲಿ ಪೊಲೀಸರು ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ’ ಎಂದು ಸಂದೇಶ ಕಳುಹಿಸುತ್ತಿದ್ದಲ್ಲದೇ ಗರ್ಭಿಣಿಯಾಗಿದ್ದ ಫರ್ಹಾನ್ನ ಆಜ್ಮಿ ಸಹೋದರಿಗೂ ಕೂಡ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಜ್ಮಿ ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ