ಕಬಾಲಿ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿಲ್ಲ ಎಂದ ಚಿತ್ರತಂಡ

ಬುಧವಾರ, 20 ಜುಲೈ 2016 (14:40 IST)
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ. ಚಿತ್ರ ಆನ್‌ಲೈನ್‌ಲ್ಲಿ ಲೀಕ್ ಆಗಿದೆ ಎಂಬ ವದಂತಿ ಹರಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಚಿತ್ರವು ಲೀಕ್ ಆಗಿಲ್ಲ ಎಂದು ಮಾಹಿತಿ ನೀಡಿದೆ.


 
ನಿನ್ನೆ ಚಿತ್ರದ ಲೀಕ್ ಕುರಿತಂತೆ ಕೆಲ ವದಂತಿಗಳು ಹರಡಿದ್ದವು... ಕಬಾಲಿ ಚಿತ್ರವು ರಿಲೀಸ್‌ಗೂ ಮುನ್ನವೇ ಲೀಕ್ ಆಗಿದೆ ಎಂಬುದು ಸುಳ್ಳು  ಸುದ್ದಿ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.

ಇದರಿಂದ ಶಾಕ್ ಆಗಿದ್ದ ರಜನಿಕಾಂತ್ ಅಭಿಮಾನಿಗಳು, 30 ನಿಮಿಷದ ಚಿತ್ರ ಸೋರಿಕೆಯಾಗಿತ್ತು ಎಂದು ಹೇಳಲಾಗುತ್ತಿತ್ತು. 

ನಿನ್ನೆ ಚಿತ್ರದ ಲೀಕ್ ಕುರಿತಂತೆ ಕೆಲ ವದಂತಿಗಳು ಹರಡಿದ್ದವು... ಕಬಾಲಿ ಚಿತ್ರವು ರಿಲೀಸ್‌ಗೂ ಮುನ್ನವೇ ಲೀಕ್ ಆಗಿದೆ ಎಂಬುದು ಸುಳ್ಳು  ಸುದ್ದಿ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ. ಇದರಿಂದ ಶಾಕ್ ಆಗಿದ್ದ ರಜನಿಕಾಂತ್ ಅಭಿಮಾನಿಗಳು, 30 ನಿಮಿಷದ ಚಿತ್ರ ಸೋರಿಕೆಯಾಗಿತ್ತು ಎಂದು ಹೇಳಲಾಗುತ್ತಿತ್ತು. 
 
ಆದ್ರೆ ಚಿತ್ರ ರಿಲೀಸ್‌ಗೂ ಮುನ್ನವೇ ಆನ್‌ಲೈನ್‌ನಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಹಾಗೂ ಉಡ್ತಾ ಪಂಜಾಬ್ ಚಿತ್ರಗಳು ಲೀಕ್ ಆಗಿದ್ದವು. 
ಮೊನ್ನೆ ತಾನೇ ಉಡ್ತಾ ಪಂಜಾಬ್ ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿ ಭಾರೀ ಸುದ್ದಿಯಾಗಿತ್ತು. ಸಿನಿಮಾ ತಂಡ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಸಹ ನೀಡಿತ್ತು. ಇನ್ನೂ ರಿಲೀಸ್ ಆಗುವ ಮುನ್ನವೇ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾ ಕೂಡ ಸಂಕಷ್ಟಕ್ಕೆ ಸಿಲುಕಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ