ಇಂದಿನ ಮಹಿಳೆಯರು ಹೆಚ್ಚು ಸ್ವತಂತ್ರರು ಎಂದ ಅನುಷ್ಕಾ ಶರ್ಮಾ
ಮುಂಬೈ: ದೇಶದಲ್ಲಿ ಇಂದು ಹಿಂದೆಗಿಂತಲೂ ಮಹಿಳೆಯರಿಗೆ ತಮ್ಮ ಮನದಾಳ ಹೇಳಿಕೊಳ್ಳಲು ಹೆಚ್ಚು ಸ್ವಾತಂತ್ರ್ಯವಿದೆ ಎಂದು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರ ಸಬಲೀಕರಣದ ಬಗ್ಗೆ ನಾವು ಇಂದು ಹೆಚ್ಚು ಮಾತನಾಡುತ್ತಿದ್ದೇವೆ. ಮಹಿಳೆಯರು ಹೆಚ್ಚು ಸ್ವತಂತ್ರರಾಗಿರುವ ಕಾಲದಲ್ಲಿ ಬದುಕುತ್ತಿರುವುದಕ್ಕೆ ನಾವು ಖುಷಿಪಡಬೇಕು. ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿದ್ದರೆ ದೇಶದಲ್ಲಿ ಆರ್ಥಿಕ ಪ್ರಗತಿ ಸಾಧ್ಯ ಎಂದಿದ್ದಾರೆ.
ಈ ವರ್ಷ ಸುಲ್ತಾನ್, ಏ ದಿಲ್ ಹೇ ಮುಷ್ಕಿಲ್ ಚಿತ್ರ ಸೇರಿದಂತೆ ಯಶಸ್ಸಿನ ಉತ್ತುಂಗದಲ್ಲಿರುವ ಅನುಷ್ಕಾ ಬಾಯಲ್ಲಿ ಮಹಿಳಾ ಸಬಲೀಕರಣದಂತಹ ವಿಷಯಗಳು ಬರುವುದು ವಿಶೇಷವೇನಲ್ಲ ಬಿಡಿ!