ಬಿಗ್ ಬಾಸ್ ನಿಂದ ಹೊರ ನಡೆದ ಮುಮೈತ್​ ಖಾನ್

ಭಾನುವಾರ, 23 ಜುಲೈ 2017 (17:15 IST)
ಹೈದರಾಬಾದ್:ತೆಲುಗು ಚಿತ್ರರಂಗದಲ್ಲಿ ಕೇಳಿಬಂದಿದ್ದ ಡ್ರಗ್ಸ್ ಸೇವನೆ ಪ್ರಕರಣ ಇದೀಗ ಬಿಗ್ ಬಾಸ್ ಶೋ ಮೇಲೂ ತನ್ನ ಕರಿ ನೆರಳು ಬೀರಿದ್ದು, ತೆಲುಗು ಬಿಗ್​​ಬಾಸ್​ನಿಂದ ನಟಿ ಮುಮೈತ್​ ಖಾನ್​ ಹೊರ ನಡೆದಿದ್ದಾರೆ. ಖ್ಯಾತ ನಟ ಜೂನಿಯರ್​ಎನ್​ಟಿಆರ್​ನಿರೂಪಣೆಯ ತೆಲುಗು ಬಿಗ್​​ಬಾಸ್ ಇತ್ತೀಚೆಗಷ್ಟೇ ಆರಂಭವಾಗಿದ್ದು, ಸ್ಪರ್ಧಿಯೊಬ್ಬರು ಶೋನಿಂದ ಹೊರಬೀಳುವ ಮೂಲಕ ಅರಂಭದಲ್ಲೇ ಆಘಾತ ಉಂಟಾಗಿದೆ.
 
ಡ್ರಗ್ಸ್ ಸೇವನೆ ಪ್ರಕರಣದಲ್ಲಿ ನಟಿ ಮುಮೈತ್ ಖಾನ್ ಅವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಮುಮೈತ್ ಖಾನ್ ಅವರ ವಿಚಾರಣೆಗೆ ಮುಂದಾಗಿದ್ದಾರೆ. ಎನ್ ಡಿಪಿಎಸ್ ಕಾಯಿದೆ ಸೆಕ್ಷನ್ 67ರ ಅಡಿಯಲ್ಲಿ ನೋಟಿಸ್​ ನೀಡಿದ್ದಾರೆ. ಹಾಗಾಗಿ ಮುಮೈತ್​ ಖಾನ್​ ಪುಣೆಯ ಲೋನಾವಲದ ಬಿಗ್​ ಬಾಸ್​  ಮನೆಯಿಂದ ಹೊರಬಂದಿದ್ದು, ಹೈದರಾಬಾದ್ ​ಗೆ ತೆರಳಲಿದ್ದಾರೆ. ಹೈದರಾಬಾದ್​ ನಲ್ಲಿ ಮುಮೈತ್​ ವಿಶೇಷ ತನಿಖಾ ತಂಡದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. 
 
ಮುಮೈತ್​ ಗೆ ಸಮನ್ಸ್​ ನೀಡುವ ಸಲುವಾಗಿ  ಎಸ್​ಐಟಿ ತಂಡ ಬಿಗ್​ಬಾಸ್​ ಆಯೋಜಕರನ್ನು ಸಂಪರ್ಕಿಸಿದ್ದರು. ಮುಮೈತ್​ ಈಗ ಬಿಗ್​ಬಾಸ್​ನಿಂದ ಹೊರ ಬಂದಿರಬಹುದು. ಮುಂದಿನ ದಿನಗಳಲ್ಲಿ ಅವರು ವಾಪಸ್ಸಾಗುವ ಸಾಧ್ಯತೆ ಸಹ ಇದೆ  ಎಂದೂ ಹೇಳಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ