ಟಾಲಿವುಡ್ ನ ಹಿರಿಯ ನಟಿ ಅನ್ನಪೂರ್ಣ ಮಗಳು ಆತ್ಮಹತ್ಯೆಗೆ ಶರಣು

ಭಾನುವಾರ, 29 ಜುಲೈ 2018 (11:50 IST)
ಹೈದರಾಬಾದ್ : ತೆಲುಗು ಚಿತ್ರರಂಗದ ಹಿರಿಯ ನಟಿ ಅನ್ನಪೂರ್ಣ ಅವರ ಮಗಳು ಕೀರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಶನಿವಾರ ಬೆಳಿಗ್ಗೆ ಬಂಜಾರಾ ಹಿಲ್ಸ್‌ನ ಕೃಷ್ಣಾ ಅಪಾರ್ಟ್‌ಮೆಂಟ್‌ನಲ್ಲಿ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತಿ ಅವರ ಮೃತದೇಹ ಪತ್ತೆಯಾಗಿದೆ. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮಗಳ ಅನಾರೋಗ್ಯದ ಕಾರಣದಿಂದಲೇ ಆತ್ಮಹತ್ಯಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.


ಕೀರ್ತಿ ಅವರು ಬೆಂಗಳೂರಿನ ಸಾಯಿಕೃಷ್ಣ ಎಂಬುವರೊಂದಿಗೆ ವಿವಾಹವಾಗಿದ್ದು, ಇವರಿಗೆ ಒಬ್ಬಳು ಮಗಳಿದ್ದಾಳೆ. ಮಗಳಿಗೆ 4 ವರ್ಷವಾದರೂ ಮಾತು ಬಾರದ ಕಾರಣ ಇವರು ಮನನೊಂದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.


ಪೊಲೀಸರು ಕೀರ್ತಿ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು,  ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ