ಕಾಜಲ್ ಅಗರ್ ವಾಲ್ ಜತೆ ಹನಿಮೂನ್ ಗೆ ಕಂಪೆನಿ ಕೊಡಲು ಸಿದ್ಧ ಎಂದ ಆ ನಟ ಯಾರು?
ಶನಿವಾರ, 28 ಜುಲೈ 2018 (11:52 IST)
ಹೈದರಾಬಾದ್ : ಕಾರ್ಯಕ್ರಮವೊಂದರಲ್ಲಿ ನಟರೊಬ್ಬ ತಮಾಷೆಗಾಗಿ ಕೇಳಿದ ಪ್ರಶ್ನೆವೊಂದರಿಂದ ನಟಿ ಕಾಜಲ್ ಅಗರ್ ವಾಲ್ ಅವರು ಮುಜುಗರಕ್ಕೊಳಗಾಗಿದ್ದಾರಂತೆ.
ಹೌದು. ಇತ್ತೀಚೆಗೆ ನಟಿ ಕಾಜಲ್ ಅಗರ್ ವಾಲ್ ಕಾರ್ಯಕ್ರಮಮೊಂದರಲ್ಲಿ ಭಾಗವಹಿಸಿದ್ದರಂತೆ. ಆಗ ಅಲ್ಲಿ ಮಲೆಯಾಳಂ ನಟರೂ ಕೂಡ ವೇದಿಕೆಯಲ್ಲಿದ್ದರಂತೆ. ಆ ವೇಳೆ ಕಾಜಲ್ ಅಗರ್ ವಾಲ್ ಅವರ ಮುಂದಿನ ಚಿತ್ರ ‘ಪ್ಯಾರೀಸ್ ಪ್ಯಾರೀಸ್’ ಬಗ್ಗೆ ನಟರೊಬ್ಬರು ಪ್ರಶ್ನೆ ಕೇಳಿದ್ದಾರಂತೆ. ಇದಕ್ಕೆ ಉತ್ತರಿಸಿದ ಕಾಜಲ್ ಅವರು ಪ್ಯಾರೀಸ್ ಪ್ಯಾರೀಸ್ ಚಿತ್ರ, ಮದುವೆ ಮುರಿದು ಬಿದ್ದ ಬಳಿಕ ಏಕಾಂಗಿಯಾಗಿರುವ ಹುಡುಗಿಯೊಬ್ಬಳ ಕತೆ, ಆಕೆ ಏಕಾಂಗಿಯಾಗಿ ಹನಿಮೂನ್ ಗೆ ಹೋಗುತ್ತಾಳೆ. ಒಂಟಿಯಾಗಿ ಪ್ಯಾರೀಸ್ ಸೇರಿದಂತೆ ಎಲ್ಲೆಡೆ ಸುತ್ತಾಡುತ್ತಾಳೆ ಎಂದು ಹೇಳಿದ್ದಾರೆ.
ಆಗ ಆ ನಟ ತಮಾಷೆಗಾಗಿ ನೀನು ಓಕೆ ಎಂದರೆ, ನಿನ್ನೊಂದಿಗೆ ನಾನು ಹನಿಮೂನ್ ಗೆ ಕಂಪೆನಿ ಕೊಡಲು ಸಿದ್ದನಿದ್ದೇನೆ ಎಂದಿದ್ದಾರಂತೆ. ನಟನ ಈ ಮಾತು ಕಾಜಲ್ ಅಗರ್ ವಾಲ್ ಅವರಿಗೆ ಮುಜುಗರವನ್ನುಂಟು ಮಾಡಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ