ಉದಯನಿಧಿ ಸ್ಟಾಲಿನ್ ನಿಂದಾಗಿ ಜವಾನ್ ಸಿನಿಮಾಗೆ ಬಾಯ್ಕಾಟ್ ಬಿಸಿ!

ಬುಧವಾರ, 6 ಸೆಪ್ಟಂಬರ್ 2023 (17:15 IST)
ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಜವಾನ್ ಸಿನಿಮಾ ನಾಳೆ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಬಿಡುಗಡೆಗೆ ಮುನ್ನ ಚಿತ್ರಕ್ಕೆ ಬಾಯ್ಕಾಟ್ ಬಿಸಿ ಎದುರಾಗಿದೆ. ಇದಕ್ಕೆ ಕಾರಣ ಉದಯನಿಧಿ ಸ್ಟಾಲಿನ್.

ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದೀಗ ತಮಿಳುನಾಡಿನಲ್ಲಿ ಜವಾನ್ ಸಿನಿಮಾದ ಹಂಚಿಕೆ ಹಕ್ಕನ್ನು ಉದಯನಿಧಿ ಒಡೆತನದ ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿದೆ.

ಹೀಗಾಗಿ ಉದಯನಿಧಿ ಮೇಲಿನ ಆಕ್ರೋಶಕ್ಕೆ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಜವಾನ್ ಸಿನಿಮಾ ಬಹಿಷ್ಕರಿಸಲು ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ