ಜವಾನ್ ಜಬರ್ದರ್ಸ್ ಟ್ರೈಲರ್ ರಿಲೀಸ್: ಶಾರುಖ್ ಖಾನ್ ಭರ್ಜರಿ ಫೈಟ್ ಹೈಲೈಟ್

ಗುರುವಾರ, 31 ಆಗಸ್ಟ್ 2023 (16:36 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ನಾಯಕರಾಗಿರುವ ಸೌತ್ ನಿರ್ದೇಶಕ ಅಟ್ಲೀ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಜವಾನ್’ ಟ್ರೈಲರ್ ರಿಲೀಸ್ ಆಗಿದೆ.

ಟ್ರೈಲರ್ ನಲ್ಲಿ ಆಕ್ಷನ್ ಸೀನ್ ಗಳೇ ಹೈಲೈಟ್. ಶಾರುಖ್ ಖಾನ್ ಜೊತೆಗೆ ನಾಯಕಿ ನಯನತಾರಾ ಕೂಡಾ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ. ಹಾಗಂತ ಕೇವಲ ಆಕ್ಷನ್ ಮಾತ್ರವಲ್ಲ, ಈ ಸಿನಿಮಾದಲ್ಲಿ ರೊಮ್ಯಾನ್ಸ್ ಕೂಡಾ ಇದ್ದು, ಅನಿರುದ್ಧ್ ರವಿಚಂದರ್ ಅವರ ಹಾಡುಗಳಿಗೆ ಶಾರುಖ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಒಟ್ಟಾರೆ ಫುಲ್ ಮಾಸ್ ಮೀಲ್ಸ್ ಪ್ರಾಡಕ್ಟ್ ಎನ್ನಬಹುದು.

ಜವಾನ್ ಟ್ರೈಲರ್ ಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದ್ದು, ಮತ್ತೊಮ್ಮೆ ಬಾಲಿವುಡ್ ಸಿನಿಮಾಗೆ ಗೆಲುವು ತಂದುಕೊಡಲು ಶಾರುಖ್ ರೆಡಿಯಾಗಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 7 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ