ಆ ಎರಡು ಕೆಲಸ ಮಹಿಳೆಯರೇ ಯಾಕೆ ಮಾಡಬೇಕು

ಬುಧವಾರ, 14 ಡಿಸೆಂಬರ್ 2016 (11:49 IST)
ಮನೆ ಕೆಲಸದ ಜೊತೆಗೆ ಹೊರಗಿನ ಕೆಲಸ ಮಾಡುವ ಅವಶ್ಯಕತೆ ಕೇವಲ ಮಹಿಳೆಯರಿಗಷ್ಟೇ ಯಾಕೆ ಇರುತ್ತೆ ಎಂದು ಬಾಲಿವುಡ್ ಬೋಲ್ಡ್ ನಟಿ ವಿದ್ಯಾ ಬಾಲನ್ ನೇರವಾಗಿ ಪ್ರಶ್ನಿಸಿದ್ದಾರೆ. ಮನೆ ಕೆಲಸ ಎಲ್ಲಾ ಮುಗಿಸಿ, ಆಮೇಲೆ ಉದ್ಯೋಗಕ್ಕೋ ಅಥವಾ ಸಿನಿಮಾ ಶೂಟಿಂಗ್‌ಗೆ ಹೊರಡಬೇಕೆಂದರೆ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದ್ದಾರೆ.
 
ತಾನು ಸೂಪರ್ ಮಹಿಳೆ ಆಗಬೇಕು ಎಂದು ಯಾವುದೇ ಕಾರಣಕ್ಕೂ ಅಂದುಕೊಂಡಿಲ್ಲ. ಶೂಟಿಂಗ್‌ನಲ್ಲಿರುವಾಗ ಶೂಟಿಂಗ್, ಮನೆಗೆ ಹೋದಾಗ ಮನೆ.. ಈ ಎರಡಲ್ಲಿ ಒಮ್ಮೊಮ್ಮೆ ಏನು ಮಾಡುತ್ತಿದ್ದೇನೆ ಎಂದು ಅನ್ನಿಸಿಬಿಡುತ್ತದೆ. ಮಹಿಳೆಯರು ಈ ಎರಡೂ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗಬೇಕೆಂದು ಹೇಳುವುದು ನಿಜಕ್ಕೂ ಅನ್ಯಾಯ ಎಂದಿದ್ದಾರೆ.
 
ಶೂಟಿಂಗ್ ಸಮಯದಲ್ಲಿ ಹೊರಗೆ ಹೋಗಬೇಕಾದಾಗ, ಅದೇ ಸಮಯದಲ್ಲಿ ಮನೆಯಲ್ಲಿ ಮುಖ್ಯವಾದ ಕೆಲಸ ಇದ್ದಾಗ.. ಕೆಲಸಕ್ಕೆ ಹೋಗಲಿಲ್ಲ ಎಂದರೆ ಅಪರಾಧಿ ಭಾವನೆ ಕಾಡುತ್ತದೆ. ಉದ್ಯೋಗ ಅಥವಾ ಬೇರೆ ಕೆಲಸಗಳಲ್ಲಿ ಮಹಿಳೆಯರು ತೊಡಗಿಕೊಂಡಿರುವ ಕಾರಣ ಕುಟುಂಬಕ್ಕೆ ಸಮಯ ಮೀಸಲು ಆಗುತ್ತಿಲ್ಲ. 
 
ನನಗೇನೋ ಶೂಟಿಂಗ್ ಎಂದರೆ ಇಷ್ಟ. ಇಲ್ಲಿ ಸುಸ್ತಾಗುವಂತಾದ್ದೇನು ಇರಲ್ಲ. ಆದರೆ ಎಲ್ಲಾ ಮಹಿಳೆಯರ ಪರಿಸ್ಥಿತಿ ಹೀಗಿರಲ್ಲ ಅಲ್ಲವೇ ಎಂದಿದ್ದಾರೆ ವಿದ್ಯಾ ಬಾಲನ್. ಒಟ್ನಲ್ಲಿ ಮಹಿಳೆಯರ ಪರ ಬ್ಯಾಟಿಂಗ್ ಮಾಡಿದ್ದಾರೆ ವಿದ್ಯಾ. ಮಹಿಳೆಯರ ಮೇಲಿ ದೌರ್ಜನ್ಯ ಕಡಿಮೆಯಾಗಬೇಕು ಎಂಬುದು ಅವರ ಸಲಹೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ