ಹೇಟ್ ಸ್ಟೋರಿ IV ರ ಬಿಸಿ ಬಿಸಿ ದೃಶ್ಯಗಳಲ್ಲಿ ಊರ್ವಶಿ ರೌತೇಲಾ( ವಿಡಿಯೋ ನೋಡಿ)

ಬುಧವಾರ, 31 ಜನವರಿ 2018 (17:19 IST)
ಹೇಟ್ ಸ್ಟೋರಿ ಅವತರಣಿಕೆಗಳು ತನ್ನದೇ ಆದ ವೀಕ್ಷಕ ವರ್ಗವನ್ನು ಹೊಂದಿದೆ. ಈ ಕಾರಣದಿಂದಲೇ ಈ ಚಿತ್ರಗಳ ಅವತರಣಿಕೆಗಳು ಅದರ ವಿಷಯ, ಬಿಸಿ ಬಿಸಿ ಚಿತ್ರಗಳು, ಬಜೆಟ್ ಮತ್ತು ನಿರ್ದೇಶನದಿಂದ ಯಶಸ್ವಿಯಾಗಿವೆ. ಕಥೆಯನ್ನು ಯಾವಾಗಲೂ ನಟಿಯ ಸುತ್ತಲೂ ಹೆಣೆದಿರಲಾಗುತ್ತದೆ ಮತ್ತು ಈ ಬಾರಿ ಹೇಟ್ ಸ್ಟೋರಿ IV ರಲ್ಲಿ ಊರ್ವಶಿ ರೌತೇಲಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶಾಲ್ ಪಾಂಡ್ಯಾ ನಿರ್ದೇಶನದ ಈ ಚಿತ್ರ ಮಾರ್ಚ್ 9 ರಂದು ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಊರ್ವಶಿ ರೌತೇಲಾ ಅವರೊಂದಿಗೆ, ವಿವನ್ ಭಟ್ನಾ ಮತ್ತು ಕರಣ್ ವಾಹಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಹಾನ್ ಧಿಲ್ಲನ್ ಮತ್ತು ಗುಲ್ಶಾನ್ ಗ್ರೋವರ್ ಕೂಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಪ್ರತೀಕಾರ ಮತ್ತು ಧೈರ್ಯದ ಮಿಶ್ರಣವಾಗಿರುತ್ತದೆ ಎಂದು ಚಿತ್ರದ ಟ್ರೇಲರ್ ಸಾಕಷ್ಟು ಸುಳಿವು ಕೊಟ್ಟಿದೆ. ಊರ್ವಶಿ ರೌತೇಲಾ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಅವರು ಮನಮೋಹಕವಾಗಿ ಮತ್ತು ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಖಂಡಿತವಾಗಿ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
 
ಟಿ-ಸಿರೀಸ್‌ನ ಚಿತ್ರ ನಿರ್ಮಾಣ, ವಿಶಾಲ್ ಪಾಂಡ್ಯಾ ನಿರ್ದೇಶನದ ಹೇಟ್ ಸ್ಟೋರಿ IV ಚಿತ್ರ ಮಾರ್ಚ 9 ರಂದು ಬಿಡುಗಡೆಯಾಗಲಿದೆ. ಚಿತ್ರ ರಸಿಕರ ಮನ ತಣಿಸುವ ಕಾತರವನನ್ನು ಚಿತ್ರ ತಂಡ ಎದುರು ನೋಡುತ್ತಿದೆ.
 
ಕನ್ನಡದಲ್ಲಿ ಊರ್ವಶಿ ರೌತೇಲಾ ಅವರು ಐರಾವತ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ