ಮುಗುಳುನಗೆ ಟ್ರೇಲರ್ ಔಟ್… ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

ಸೋಮವಾರ, 28 ಆಗಸ್ಟ್ 2017 (11:45 IST)
ಬೆಂಗಳೂರು: ರೊಮ್ಯಾಂಟಿಕ್ ಹಾಡುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳುನಗೆ ಚಿತ್ರದ ಟ್ರೇಲರ್ ಔಟ್ ಆಗಿದೆ.

ಮುಂಗಾರುಮಳೆ, ಗಾಳಿಪಟದಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ಗಣೇಶ್ ಈ ಸಿನಿಮಾದಲ್ಲಿ ಮತ್ತೆ ಒಂದಾಗಿರೋದು ವಿಶೇಷ. ಸದ್ಯ ಮುಗುಳುನಗೆ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ನಲ್ಲೇ ಭಟ್ರು ಮೋಡಿ ಮಾಡಿದ್ದಾರೆ.



ಈ ಚಿತ್ರದಲ್ಲಿ ಗಣೇಶ್ ಜೊತೆಯಾಗಿ ನಾಲ್ವರು ನಟಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಆಶಿಕಾ ರಂಗನಾಥ್, ಅಪೂರ್ವ ಅರೋರಾ, ನಿಖಿತಾ ನಾರಾಯಣ್ ಮತ್ತು ಅಮೂಲ್ಯ ನಟಿಸಿದ್ದಾರೆ. ಅಮೂಲ್ಯ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಚಿತ್ರ ಬಿಡುಗಡೆಗೆ ಮೊದಲೇ ಮುಗುಳುನಗೆಯ ಎಲ್ಲಾ ಹಾಡುಗಳು ಹಿಟ್ ಆಗಿವೆ.

ಇದೇ ಸೆಪ್ಟಂಬರ್ 1 ರಂದು ಮುಗುಳುನಗೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಬಹು ವರ್ಷಗಳ ಬಳಿಕ ಒಟ್ಟಿಗೆ ಮಾಡಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ