ಅನುಷ್ಕಾ ಟ್ರೈನಿಂಗ್ ನೋಡಿ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ

ಬುಧವಾರ, 21 ಸೆಪ್ಟಂಬರ್ 2022 (08:40 IST)
ಮುಂಬೈ: ಮಗುವಾದ ಬಳಿಕ ಅನುಷ್ಕಾ ಶರ್ಮಾ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ವೇಗಿ ಜೂಲಾನ್ ಗೋಸ್ವಾಮಿ ಜೀವನಾಧಾರಿತ ಛಕ್ದಾ ಎಕ್ಸ್ ಪ್ರೆಸ್ ಎನ್ನುವ ಸಿನಿಮಾದಲ್ಲಿ ಅನುಷ್ಕಾ ಜೂಲಾನ್ ಪಾತ್ರ ಮಾಡುತ್ತಿದ್ದಾರೆ.

ಕ್ರಿಕೆಟ್ ಆಟಗಾರ್ತಿಯ ಪಾತ್ರ ಮಾಡುವುದಕ್ಕಾಗಿ ಅನುಷ್ಕಾ ಸಾಕಷ್ಟು ಹೋಂ  ವರ್ಕ್ ಮಾಡಿಕೊಂಡಿದ್ದಾರೆ. ಜೂಲಾನ್ ಜೊತೆ ಸಮಯ ಕಳೆದಿದ್ದಲ್ಲದೆ, ಅವರಂತೆ ಬೌಲಿಂಗ್ ಮಾಡಲು ಕಲಿತಿದ್ದಾರೆ. ಅಲ್ಲದೆ, ಪಕ್ಕಾ ವೃತ್ತಿಪರ ಕ್ರಿಕೆಟಿಗರಂತೆ ಟ್ರೈನಿಂಗ್ ಪಡೆದಿದ್ದಾರೆ.

ಇದನ್ನೆಲ್ಲಾ ನೋಡಿ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರಂತೆ. ತಮ್ಮ ಪತ್ನಿಯ ಈ ಡೆಡಿಕೇಷನ್ ಗೆ ಹ್ಯಾಟ್ಸಪ್ ಎಂದಿದ್ದಾರೆ ಕೊಹ್ಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ