ಮೊಹಾಲಿಯಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡ ವಿರಾಟ್ ಕೊಹ್ಲಿ

ಸೋಮವಾರ, 19 ಸೆಪ್ಟಂಬರ್ 2022 (10:20 IST)
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ನಿನ್ನೆಯಿಂದ ಕಠಿಣ ಅಭ್ಯಾಸ ಆರಂಭಿಸಿದೆ.

ಕಿಂಗ್ ಕೊಹ್ಲಿ ನೆಟ್ ಪ್ರಾಕ್ಟೀಸ್ ವೇಳೆ ಭಾರತದ ವಿವಿಧ ಬೌಲರ್ ಗಳನ್ನು ಎದುರಿಸಿದ್ದು, ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಏಷ್ಯಾ ಕಪ್ ವೇಳೆಗೆ ಫಾರ್ಮ್ ಕಂಡುಕೊಂಡಿದ್ದ ಕೊಹ್ಲಿ ಅದನ್ನೇ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ನಿನ್ನೆ ಹೆಚ್ಚು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸಕ್ಕೆ ಟೀಂ ಇಂಡಿಯಾ ಆಟಗಾರರು ಒತ್ತುಕೊಟ್ಟರು. ಟಿ20 ವಿಶ್ವಕಪ್ ಗೆ ಮೊದಲು ನಡೆಯುತ್ತಿರುವ ಮಹತ್ವದ ಟೂರ್ನಿ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ