ರಾಹುಲ್ ದ್ರಾವಿಡ್ ದಾಖಲೆ ಮುರಿದು ಗ್ರೇಟ್ ಎನಿಸಿಕೊಳ್ಳಲಿರುವ ವಿರಾಟ್ ಕೊಹ್ಲಿ
ಇನ್ನು 63 ರನ್ ಗಳಿಸಿದರೆ ವಿರಾಟ್ ಕೊಹ್ಲಿ ಭಾರತದ ಆಲ್ ಟೈಮ್ ಗ್ರೇಟ್ ಕ್ರಿಕೆಟಿಗರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲಿದ್ದಾರೆ. ಸದ್ಯಕ್ಕೆ ಮೊದಲಿನ ಸ್ಥಾನದಲ್ಲಿ ಸಚಿನ್ ತೆಂಡುಲ್ಕರ್ ಇದ್ದಾರೆ. ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಇದ್ದಾರೆ.
ಒಂದು ವೇಳೆ ಕೊಹ್ಲಿ 63 ರನ್ ಗಳಿಸಿದರೆ ಭಾರತದ ಪರ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ದ್ರಾವಿಡ್ ರನ್ನು ಹಿಂದಿಕ್ಕಿ ಎರಡನೇ ಸ‍್ಥಾನಕ್ಕೆ ಏರಲಿದ್ದಾರೆ. ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 24,064 ರನ್ ಗಳಿಸಿದ್ದಾರೆ. ಸಚಿನ್ 34,357 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.