ವಿರುಷ್ಕಾ ಜೋಡಿಗೆ ಮತ್ತೊಮ್ಮೆ ಮದುವೆಯಾಗುವ ಅನಿವಾರ್ಯತೆ ಬಂದು ಬಿಟ್ಟಿತಾ…?

ಮಂಗಳವಾರ, 9 ಜನವರಿ 2018 (06:48 IST)
ಮುಂಬೈ : ಕಳೆದ ವರ್ಷ ಇಟಲಿಯಲ್ಲಿ ಮದುವೆಯಾದ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಇನ್ನೊಮ್ಮೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

 
ಪಂಜಾಬ್ ಹರಿಯಾಣ ಹೈಕೋರ್ಟ್ ವಕೀಲ ಹಾಗು ಅಂಬಾಲ ನಿವಾಸಿ ಹೇಮಂತ್ ಕುಮಾರ್ ಅವರು ಆರ್.ಟಿ.ಐ. ಸಲ್ಲಿಸಿದ್ದು, ಇದಕ್ಕೆ ರೋಮ್ ನಲ್ಲಿರುವ ಭಾರತೀಯ ರಾಯಾಭಾರಿಗಳು ಉತ್ತರ ನೀಡಿದ್ದಾರೆ.  ವಿದೇಶದಲ್ಲಿ ಮದುವೆಯಾಗುವಾಗ ರಾಯಾಭಾರಿ ಕಚೇರಿಗೆ ಮಾಹಿತಿ ನೀಡಬೇಕು. ಆದರೆ ವಿರಾಟ್ ಹಾಗು ಅನುಷ್ಕಾ ಅವರು ನಿಯಮದ ಪ್ರಕಾರ ರೋಮ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ತಾವು ಮದುವೆಯಾಗುತ್ತಿರುವುದರ ಬಗ್ಗೆ ಮಾಹಿತಿ ನೀಡಿಲ್ಲವಾದ್ದರಿಂದ ಅವರ ಮದುವೆ ನೊಂದಾವಣೆಗೆ ತೊಂದರೆಯಾಗುವ ಸಾಧ್ಯತೆ ಇದೆ.


ಆದ್ದರಿಂದ ಅವರು ಭಾರತದ ಯಾವ ಜಾಗದಲ್ಲಿ ವಾಸ್ತವ್ಯ ಹೂಡಿರುತ್ತಾರೊ ಆ ರಾಜ್ಯದ ನಿಯಮಾನುಸಾರ ಮದುವೆ ನೊಂದಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಅವರು ಮತ್ತೊಮ್ಮೆ ರಿಜಿಸ್ಟರ್ ಮ್ಯಾರೇಜ್ ಆಗುವ ಅನಿವಾರ್ಯತೆ ಬರಬಹುದು ಎಂದು ಹೇಮಂತ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ