ಬರ್ತಡೇ ಶುಭಾಷಯಕ್ಕಾಗಿ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ಕಾಜೋಲ್

ಶನಿವಾರ, 6 ಆಗಸ್ಟ್ 2016 (17:51 IST)
ಬಾಲಿವುಡ್ ನಟಿ ಕಾಜೋಲ್ ನಿನ್ನೆ ತಮ್ಮ ಬರ್ತಡೇ ಆಚರಿಸಿಕೊಂಡಿದ್ದರು. ಈ ವೇಳೆ ಅವರ ಅಪಾರ ಅಭಿಮಾನಿಗಳು ಹುಟ್ಟುಹಬ್ಬದ ದಿನದಂದು ಶುಭಾಷಯಗಳನ್ನು ಅಭಿಮಾನಿಗಳು ಕಳುಹಿಸಿದ್ದರು. ಇದಕ್ಕಾಗಿ ನಟಿ ಕಾಜೋಲ್ ತಮ್ಮ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ. 

ಒಂದು ಕಾಲದಲ್ಲಿ ಶಾರೂಖ್ ಹಾಗೂ ಕಾಜೋಲ್ ಜೋಡಿ ತೆರೆ ಮೇಲೆ ಹೆಚ್ಚು ಮೋಡಿ ಮಾಡಿತ್ತು. ಶಾರೂಖ್ ಕಾಜೋಲ್ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಾರೆ ಎಂದ್ರೆ ಇಬ್ಬರ ರೋಮ್ಯಾನ್ಸ್ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುತ್ತಿದ್ದರು.. ಅಷ್ಟರ ಮಟ್ಟಿಗೆ ಈ ಜೋಡಿಗಳು ಬಿಟೌನ್‌ನಲ್ಲಿ ಸದ್ದು ಮಾಡಿದ್ರು.

ಅಲ್ಲದೇ ತಮ್ಮ ಪತಿ ಹಾಗೂ ಮಗಳ ಜತೆಗೆ ಬರ್ತಡೇ ಆಚರಿಸಿಕೊಳ್ಳುವ ಪ್ಲ್ಯಾನ್ ನಲ್ಲಿದ್ದರು. ಆದ್ರೆ ಅಜಯ್ ದೇವಗನ್ ಮುಂಬರುವ ಚಿತ್ರ ಶಿವಯ್ಯ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರು. 

'ಕುಛ್ ಕುಛ್ ಹೋತಾ ಹೇ' ಚಿತ್ರದಲ್ಲಿ ಶಾರೂಖ್ ಜತೆಗೆ ಬಿಂದಾಸ್ ಆಗಿ ನಟಿಸಿ ಇಂದಿಗೂ ಕಾಜೋಲ್ ಅಭಿಮಾನಿಗಳು ಮನಸಲ್ಲಿ ನೆಲೆಯೂರಿದ ನಟಿ..
 
ಬಾಲಿವುಡ್‌ನಲ್ಲಿ ಮಿಂಚಿ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಅಪರೂಪದ ಚೆಲುವೆಯರಾದ ಕಾಜೋಲ್ ಜನಮಾನಸದಲ್ಲಿ ಹಾಗೆಯೇ ಉಳಿದಿದ್ದಾರೆ. ಅಂತಹ ಚೆಲುವೆಯರಲ್ಲಿ ನಟಿ ಕಾಜೋಲ್ ಕೂಡ ಒಬ್ಬರು.. ಕ್ಯಾಮರಾ ಕಣ್ಣಿಗೆ ಸಿಕ್ಕಿದ ಅಪರೂಪದ ಚಿತ್ರಗಳನ್ನು ಅಭಿಮಾನಿಗಳು ಇಂದಿಗೂ ಹಿಡಿದಿಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ