ಲಂಡನ್ ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಜಗತ್ತಿನ ಅತ್ಯಂತ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಇತ್ತೀಚೆಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆಯನ್ನು ಇನ್ನು ತಯಾರಿಸಲಾಗಿದೆ.
ಇದೇ ರೀತಿ ಶಿವಣ್ಣ ಕೂಡ ತಮ್ಮ ತಂದೆಯ ಮೇಣದ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಬೇಕು ಅನ್ನೋ ಆಸೆಯನ್ನು ಹೊರ ಹಾಕಿದ್ದಾರೆ.ಇತ್ತೀಚೆಗೆ ಮಾತನಾಡುತ್ತ ಶಿವರಾಜ್ ಕುಮಾರ್ ಅವರು ನಾನು ಇತ್ತೀಚೆಗೆ ನನ್ನ ಕುಂಬದವರೊಂದಿಗೆ ಶಿವಲಿಂಗ ಸಿನಿಮಾದ ರಿಲೀಸ್ ವೇಳೆ ಲಂಡನ್ ಗೆ ತರೆಳಿದ್ದೆ.
ಅಲ್ಲಿನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಭೇಟಿ ಕೊಟ್ಟಿದೆ.ಅಲ್ಲಿರುವ ಮೇಣದ ಪ್ರತಿಮೆಗಳನ್ನು ನೋಡಿದ ಬಳಿಕ ನನಗೂ ಇಲ್ಲಿ ನನ್ನ ತಂದೆಯ ಮೇಣದ ಪ್ರತಿಮೆ ಇದ್ರೆ ಚೆನ್ನಾಗಿರುತ್ತಿತ್ತು ಅಂತಾ ಅನ್ನಿಸಿತು ಅಂತಾ ಹೇಳಿದ್ದಾರೆ.
ಆ ಮೂಲಕ ತಮ್ಮ ಮನದಾಸೆನ್ನು ಹೊರ ಹಾಕಿದ್ದಾರೆ ಶಿವಣ್ಣ. ಇಲ್ಲಿ ಈಗಾಗಲೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮುಂತಾದವರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಇನ್ನು ಲಂಡನ್ ನಲ್ಲಿ ಕನ್ನಡಗಿರು ತನಗೆ ನೀಡದ ಆತಿಥ್ಯವನ್ನು ಕೂಡ ಶಿವರಾಜ್ ಕುಮಾರ್ ಅವರು ನೆನಪಿಸಿಕೊಂಡಿದ್ದಾರೆ. ನಮ್ಮನ್ನು ಲಂಡನ್ ನಲ್ಲಿರುವ ಕನ್ನಡಿಗರು ತುಂಬಾ ಚೆನ್ನಾಗಿ ನೋಡಿಕೊಂಡ್ರು ಅಂತಾ ಹೇಳಿದ್ದಾರೆ. ಇನ್ನು ನನ್ನ ತಂದೆ ಸಿನಿಮಾಗಳು ಹಾಗೇ ಅವರ ಸಾಧನೆಯ ಬಗ್ಗೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಸಿಬ್ಬಂದಿಗೆ ತಿಳಿಸಿದ್ದೇನೆ ಅಂತಾ ಕೂಡ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ