ನಟಿ ಐಶ್ವರ್ಯಾ ರೈ ಬಚ್ಚನ್ `ಮಿಟೂ’ ಚಳುವಳಿಯ ಬಗ್ಗೆ ಹೇಳಿದ್ದೇನು...?

ಶುಕ್ರವಾರ, 30 ಮಾರ್ಚ್ 2018 (10:03 IST)
ಮುಂಬೈ : ಹಾಲಿವುಡ್‍ನ ಪ್ರಸಿದ್ಧ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಲೈಂಗಿಕ ದೌರ್ಜನ್ಯದ ಹಗರಣ  ಬೆಳಕಿಗೆ ಬರುತ್ತಿದ್ದಂತೆ ಕಳೆದ ವರ್ಷ ಹಾಲಿವುಡ್ ನವರು ಮಿಟೂ ಚಳುವಳಿ ಕಿಕ್ ಸ್ಟಾರ್ಟರ್ ಅನ್ನು ಬೆಂಬಲಿಸಿದ್ದು, ಇದೀಗ ಬಾಲಿವುಡ್ ನಟಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಕೂಡ `ಮಿಟೂ’ ಚಳುವಳಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.


ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದರಲ್ಲಿ ಈ ಚಳುವಳಿಯ ಬಗ್ಗೆ ಮಾತನಾಡಿದ ನಟಿ ಐಶ್ವರ್ಯಾ ರೈ ಬಚ್ಚನ್ ಅವರು,’ ಸಿಡ್ನಿಯಲ್ಲಿ `ಮಿಟೂ’ ಚಳುವಳಿಯ ಬಗ್ಗೆ ಮಾತುಕತೆ ನಡೆದಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿದ್ದು, ಈ ವಿಚಾರವನ್ನು `ಮಿಟೂ’ ನಲ್ಲಿ ಹಂಚಿಕೊಂಡರೆ ಬಗೆಹರಿಸಲು ಸಾಧ್ಯವಾಗುತ್ತದೆ ಅಂತ ತೀರ್ಮಾನಕ್ಕೆ ಬರಲಾಗಿದೆ. ತುಂಬಾ ಚರ್ಚೆ ಮಾಡಿದ ಬಳಿಕ ಈ ಚಳುವಳಿಯನ್ನು ಪ್ರಾರಂಭಿಸಲಾಗಿದೆ. ಒಂದು ಒಳ್ಳೆ ವಿಷಯ ಎಂದರೆ ಈ ಕುರಿತು ಜನರು ಕೂಡ ಮಾತನಾಡುತ್ತಿದ್ದಾರೆ. ಇದು ವಿಶ್ವಕ್ಕೆ ಸೇರಿದ್ದು, ಇದನ್ನು ಸೀಮಿತವಾಗಿಸುವುದಿಲ್ಲ. ಈ ಚಳುವಳಿಯು ಸಕಾರಾತ್ಮವಾಗಿದೆ ಎಂದು ತಿಳಿಸಿದ್ದಾರೆ.


ಹಾಗೇ ಅವರು,’ ಮಹಿಳೆ ತನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತಾನೇ ಬಂದು ಮಾತನಾಡಿದರೆ ಒಳ್ಳೆಯದು. ಆಕೆ ಯಾವುದಕ್ಕೂ ರಾಜಿ ಮಾಡಿಕೊಳ್ಳದೆ ಹೇಳಿಕೊಂಡರೆ ಅದು ಖುಷಿಯ ವಿಷಯವಾಗಿದೆ. ಇದು ಯಾವುದೇ ವ್ಯವಹಾರ ಅಥವಾ ಚಲನಚಿತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಎಲ್ಲ ರೀತಿಯಲ್ಲೂ ಮಹಿಳೆಯರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೇಳಿಕೊಳ್ಳಲು ಇಲ್ಲಿ ಮುಕ್ತ ಅವಕಾಶವಿದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ