ಹೌದು. ಸುಲೇಖ ಎಂಬುವವರು ಇತ್ತೀಚೆಗೆ ಹೈದರಾಬಾದ್‍ನಲ್ಲಿ ಮದುವೆಯಾಗಿದ್ದರು. ಫ್ರಿನ್ಸ್ ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿಯಾಗಿದ್ದ ಸುಲೇಖ ಅವರ ಮದುವೆಯ ಆಹ್ವಾನ ಪತ್ರಿಕೆಯನ್ನು ಅವರ ಸಂಬಂಧಿಕರು ಮಹೇಶ್ ಬಾಬು ಅವರಿಗೆ ಕಳುಹಿಸಿದ್ದರು.
ಆಗ ಮಹೇಶ್ ಬಾಬು ಅವರು ಸ್ವತಃ ತಾವೇ ತಯಾರು ಮಾಡಿದ ಗ್ರೀಟಿಂಗ್ ಕಾರ್ಡ್ ನ್ನು ಉಡುಗೊರೆಯಾಗಿ ಕಳುಹಿಸಿದ್ದು, ಆ ಕಾರ್ಡನ್ನು ಸುಲೇಖಾ ಮದುವೆ ದಿನ ಆಕೆಯ ಸಂಬಂಧಿಕರು ಉಡುಗೊರೆಯಾಗಿ ನೀಡಿದ್ದಾರೆ. ಆ ಕಾರ್ಡ್ ನಲ್ಲಿ ನಟ ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಸಿರೋದ್ಕರ್ ತಮ್ಮ ಆಟೋಗ್ರಾಫ್ ನೀಡಿದ್ದನ್ನು ಕಂಡು ಸುಲೇಖ ತುಂಬಾ ಸಂತೋಷಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ