ಹೈದರಾಬಾದ್ : ಸೂಪರ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಜೋಡಿಯಾಗಿ ನಟಿಸಿದ ಪ್ರಭಾಸ್ ಹಾಗೂ ಅನುಷ್ಕಾ ಅವರು ಈಗಾಗಲೇ ಅಭಿಮಾನಿಗಳಿಗೆ ತಾವು ಲವರ್ಸ್ ಅಲ್ಲ ಎಂದು ಹೇಳುವುದರ ಮೂಲಕ ತಮ್ಮ ಬಗ್ಗೆ ಹುಟ್ಟಿಕೊಂಡ ಗಾಸಿಪ್ ಗೆ ತೆರೆ ಎಳೆದಿದ್ದು,ಆದರೆ ಇದೀಗ ಅನುಷ್ಕಾ ಅವರು ಪ್ರಭಾಸ್ ಅವರನ್ನು ಭೇಟಿಯಾಗಲು ವಿದೇಶಕ್ಕೆ ತೆರಳಿರುವುದರ ಮೂಲಕ ಮತ್ತೆ ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿಸಿದ್ದಾರೆ.
ಹೌದು ನಟಿ ಅನುಷ್ಕಾ ಅವರು ಪ್ರಭಾಸ್ ಅವರನ್ನು ಭೇಟಿ ಮಾಡಲು ದುಬೈಗೆ ತೆರಳಿದ್ದಾರಂತೆ. ಪ್ರಭಾಸ್ ಅಭಿನಯದ ಸಾಹೋ ಚಿತ್ರದ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದ್ದು, ಸ್ಟಂಟ್ ನೃತ್ಯ ನಿರ್ದೇಶಕ ಕೆನ್ನಿ ಬಟ್ಸ್, ನೇತೃತ್ವದಲ್ಲಿ ಭಾರಿ ಆಯಕ್ಷನ್ ಸೀಕ್ವೆನ್ಸ್ ಗಳನ್ನು ಚಿತ್ರಿಸಲಾಗ್ತಿದೆ. ಆದ ಕಾರಣ ಅನುಷ್ಕಾ ಅವರು ದುಬೈಗೆ ತೆರಳಿ ಪ್ರಭಾಸ್ ಅವರ ಆರೋಗ್ಯ ವಿಚಾರಿಸಿ ಈಗಾಗಲೇ 2 ಬಾರಿ ಭುಜಕ್ಕೆ ಗಾಯಮಾಡಿಕೊಂಡ ಕಾರಣದಿಂದ ತುಂಬಾ ಕಷ್ಟವಾದ ಸ್ಟಂಟ್ ಮಾಡದಂತೆ ತಿಳಿಸಿದ್ದಾರಂತೆ. ಇದನ್ನು ತಿಳಿದ ಅಭಿಮಾನಿಗಳಿಗೆ ಅವರಿಬ್ಬರು ಲವರ್ಸ್ ಅನ್ನೋ ಅನುಮಾನ ಹುಟ್ಟಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ