ನಟಿ ಸೋನಂ ಕಪೂರ್ ಅವರು ಮೇ 8ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅಂದು ಮದುವೆಯ ಮೆಹಂದಿ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಶೂ ಗಳನ್ನ ಉಡುಗೊರೆಯಾಗಿ ನೀಡಲಾಗಿತ್ತು. ಮೊಜರಿಸ್ ಅಂತ ಕರೆಯಲ್ಪಡುವ ಈ ದೇಸಿ ಶೋಗಳನ್ನು ದುಬಾರಿ ಚರ್ಮದಿಂದ ಮಾಡಲಾಗಿದ್ದು ಅದರ ಮೇಲೆ ರಾಜಸ್ಥಾನಿ ಕುಸುರಿ ಹಾಗು ಮಿರರ್ ವರ್ಕ್ ಮಾಡಲಾಗಿದೆ. ಅಂತಾರಾಷ್ಟ್ರೀಯ ಗುಣ ಮಟ್ಟದ ಈ ಶೂ ಗಳನ್ನೂ ವೈಟ್ ಅಂಡ್ ಗೋಲ್ಡ್ ಕಾನ್ಸೆಪ್ಟ್ನಲ್ಲೇ ರೆಡಿ ಮಾಡಲಾಗಿತ್ತು.
ಮೆಹಂದಿ ಕಾರ್ಯಕ್ರಮದಲ್ಲಿ ಈ ಶೂ ಗಳನ್ನ ತೊಟ್ಟು ಡ್ಯಾನ್ಸ್ ಮಾಡಿದ್ರೆ, ಕಾಲುಗಳು ನೋವು ಬರದಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿತ್ತು. ಈ ಶೂ ನ ಬೆಲೆ ಸುಮಾರು 10 ಸಾವಿರ ರೂ ಗಳಂತೆ. ಈ ಶೂಗಳನ್ನು ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ಕೊಟ್ಟಾಗ, ಕೆಲವರು ಖುಷಿ ಪಟ್ಟರೆ, ಇನ್ನೂ ಕೆಲವರಿಗೆ ಶಾಕ್ ಆಗಿದೆಯಂತೆ.