ತನ್ನ ಹಾಗೂ ನಟ ಟಾಮ್ ಹಿಡ್ಲ್‍ಸ್ಟನ್ ರೂಮರ್ಸ್ ಬಗ್ಗೆ ನಟಿ ಪ್ರಿಯಾಂಕ ಹೇಳಿದ್ದೇನು ಗೊತ್ತಾ
ಗುರುವಾರ, 10 ಮೇ 2018 (14:26 IST)
ಮುಂಬೈ : ಈ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಹಾಗೂ ಬಾಲಿವುಡ್ ನಟ, ನಿರ್ಮಾಪಕ ಹಾಗೂ ಜಾದೂಗಾರ ಟಾಮ್ ಹಿಡ್ಲ್‍ಸ್ಟನ್ ಅವರ ಸಂಬಂಧದ ಬಗ್ಗೆ ಅನೇಕ ಬಾರಿ ರೂಮರ್ಸ್ ಗಳು ಹರಿದಾಡಿದ್ದವು. ಆ ಸುದ್ದಿ ಈಗಲೂ ಕೇಳಿಬಂದಿರುವ ಹಿನ್ನಲೆಯಲ್ಲಿ ಇದೀಗ ನಟಿ ಪ್ರಿಯಾಂಕ ಅವರು ಈ ಬಗ್ಗೆ ಸ್ಪಷ್ಟನೆ ನೀಡುವುದರ ಮೂಲಕ ಈ ರೂಮರ್ಸ್ ಗೆ ತೆರೆ ಎಳೆದಿದ್ದಾರೆ.
ಎರಡು ವರ್ಷಗಳ ಹಿಂದೆ ಶೋವೊಂದರಲ್ಲಿ ಭಾಗವಹಿಸಿದ್ದ ಟಾಮ್ ಮತ್ತು ಪ್ರಿಯಾಂಕ ತೀರಾ ಸನಿಹದಲ್ಲಿದ್ದರು. ಒಬ್ಬರಿಗೊಬ್ಬರು ಕೈ ಹಿಡಿದುಕೊಂಡಿದ್ದರು. ಪಿಗ್ಗಿ ಆತನ ಟೈ ಸರಿಪಡಿಸಿದಳು. ಇಬ್ಬರು ಪರಸ್ಪರ ಚುಂಬನ ವಿನಿಮಯ ಮಾಡಿಕೊಂಡರು ಎಂದು ಅಂತಾರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿತ್ತು.
ಈ ಬಗ್ಗೆ ಆಯಂಡಿ ಕೊಹೆನ್ ಟಾಕ್ ಶೋನಲ್ಲಿ ಪ್ರಿಯಾಂಕ ಅವರನ್ನು ಪ್ರಶ್ನಿಸಿದಾಗ ‘ಅಯ್ಯೋ ನಾನು ನಟ ಟಾಮ್‍ನನ್ನು ಭೇಟಿಯಾಗಿದ್ದು ಕೇವಲ 15 ನಿಮಿಷಗಳು. ಆತನೊಂದಿಗೆ ವೇದಿಕೆಯಲ್ಲಿ 10 ನಿಮಿಷ ಹಾಗೂ ತೆರೆ ಹಿಂದೆ 5 ನಿಮಿಷ ಇದ್ದೆ. ಇದರಲ್ಲಿ ಅಂಥ ವಿಶೇಷತೆ ಏನೂ ಇಲ್ಲ. ನಾವು ಸ್ನೇಹಿತರಂತೆ ಇದ್ದೆವು, ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ