ರಾಘವ ಲಾರೆನ್ಸ್ ಗಾಗಿ ನಟಿ ಶ್ರೀರೆಡ್ಡಿ ಅಪ್ಲೋಡ್ ಮಾಡಿದ ವಿಡಿಯೋ ಏನು ಗೊತ್ತಾ...?

ಬುಧವಾರ, 1 ಆಗಸ್ಟ್ 2018 (06:48 IST)
ಹೈದರಾಬಾದ್ : ನಟ, ನಿರ್ದೇಶಕ, ಕೋರಿಯೊಗ್ರಾಫರ್ ಹಾಗು ನಿರ್ಮಾಪಕ  ರಾಘವ ಲಾರೆನ್ಸ್, ನಟಿ ಶ್ರೀರೆಡ್ಡಿ ಅವರಿಗೆ ಸವಾಲೊಂದನ್ನು ನೀಡಿದ್ದು ಅದನ್ನು ಸ್ವೀಕರಿಸಿದ ನಟಿ ಶ್ರೀರೆಡ್ಡಿ ಇದೀಗ ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.


ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ರಾಘವ ಲಾರೆನ್ಸ್ ಅವರು ನಟಿ ಶ್ರೀರೆಡ್ಡಿ ಅವರನ್ನು ಕುರಿತು 'ನೀವು ನಿಜವಾಗಿಯೂ ನಟಿಯಾಗಿದ್ದರೆ, ನಿಮ್ಮಲ್ಲಿ ನಟನಾ ಕೌಶಲ್ಯವಿದ್ದರೆ, ಅದನ್ನು ಸಾಬೀತು ಪಡಿಸಿ. ನಿಮ್ಮ ಪ್ರತಿಭೆ ಮೂಲಕ ನಮ್ಮನ್ನು ಇಂಪ್ರೆಸ್​ ಮಾಡಿದ್ದೇಯಾದ್ರೆ ನನ್ನ ಮುಂದಿನ ಚಿತ್ರದಲ್ಲಿ ನಿಮಗೆ ಖಂಡಿತವಾಗಿಯೂ ಅವಕಾಶ ನೀಡುತ್ತೇನೆ’ ಎಂದು  ಚಾಲೆಂಜ್ ಮಾಡಿದ್ದರು.


ಇದೀಗ ರಾಘವ ಲಾರೆನ್ಸ್ ಅವರ ಚಾಲೆಂಜ್ ನ್ನು ಸ್ವೀಕರಿಸಿದ ನಟಿ ಶ್ರೀರೆಡ್ಡಿ ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ ಜೊತೆಗೆ 'ಇದು ನನ್ನ ಸಾಮಾನ್ಯ ಪ್ರತಿಭೆ, ದಯವಿಟ್ಟು ನೋಡಿ. ನಿಮಗಾಗಿಯೇ ಇದನ್ನು ಮಾಡಿದ್ದು' ಎಂದು ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ