ನಟಿ ಕರೀನಾ ಕಪೂರ್ ನೆಚ್ಚಿನ ಕ್ರಿಕೆಟರ್ ಯಾರು ಗೊತ್ತಾ?

ಶನಿವಾರ, 26 ಮೇ 2018 (06:50 IST)
ಮುಂಬೈ : ತಾಯಿಯಾದ ನಂತರ ಮತ್ತೆ ಫಿಟ್ ಆಗಿ ಸಿನಿಮಾರಂಗಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಇದೀಗ ತಮ್ಮ ನೆಚ್ಚಿನ ಕ್ರಿಕೆಟರ್ ಯಾರು ಎಂಬುದನ್ನು ಹೇಳಿದ್ದಾರೆ.


2 ವರ್ಷದ ನಂತರ ಸಿಲ್ವರ್ ಸ್ಕ್ರೀನ್‌ನ ಮೇಲೆ  ಮತ್ತೆ ಕಾಣಿಸಿಕೊಂಡ ಕರೀನಾ ಕಪೂರ್ ಅವರು  ತಾವು ನಟಿಸಿರುವ ವೀರೆ ದಿ ವೆಡ್ಡಿಂಗ್ ಸಿನಿಮಾದ ಪ್ರಮೋಶನ್‌ ಗಾಗಿ ತೆರಳಿದ್ದ ಸಂದರ್ಭದಲ್ಲಿ ಯಾವ ಕ್ರಿಕೆಟರ್ ಅಂದ್ರೆ ನಿಮಗಿಷ್ಟ ಯಾರು ಫಿಟ್ ಆಗಿದ್ದಾರೆ ಅಂತ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರೋ ಕರೀನಾ ಕಪೂರ್ ಅವರು,’ ನನಗೆ ವಿರಾಟ್ ಕೊಹ್ಲಿ ಅಂದ್ರೆ ತುಂಬಾ ಇಷ್ಟ. ಅವರು ನಿಜವಾಗ್ಲು ಫಿಟ್ ಅಂಡ್ ಹಾಟ್ ಆಗಿದ್ದಾರೆ. ಜೊತೆಗೇ ಸೈಫ್ ಅಲಿ ಖಾನ್‌ರನ್ನೇ ಹೆಚ್ಚು ಇಷ್ಟ ಪಡ್ತೀನಿ ಅಂತಲೂ ಸೇರಿಸಿದ್ದಾರೆ. ಇನ್ನು, ಕೊಹ್ಲಿ ಜೊತೆಗೆ ಕೇನ್ ವಿಲಿಯಮ್‌ ಸನ್ ಅಂದ್ರೂನು ಇಷ್ಟವಂತೆ ಅವ್ರೂ ಕೂಡ ಫಿಟ್ ಅಂಡ್ ಹಾಟ್ ಆಗಿದ್ದಾರೆ ಅಂತ ಕರೀನಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ