ಸಲ್ಮಾನ್ ಖಾನ್ ಜೈಲು ಶಿಕ್ಷೆ ಅನುಭವಿಸುತ್ತಿರುವುದರ ಬಗ್ಗೆ ಸಂಸತ ವ್ಯಕ್ತಪಡಿಸಿದ ಈ ನಟಿ ಯಾರು ಗೊತ್ತಾ…?
ಶನಿವಾರ, 7 ಏಪ್ರಿಲ್ 2018 (10:14 IST)
ಮುಂಬೈ : ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣದಲ್ಲಿ ಜೈಲು ವಾಸ ಅನುಭಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಗ್ಗೆ ಇಡೀ ಬಾಲಿವುಡ್ ಬೇಸರ ವ್ಯಕ್ತಪಡಿಸಿದ್ದರೆ ನಟಿಯೊಬ್ಬಳು ಮಾತ್ರ ಸಲ್ಮಾನ್ ಖಾನ್ ಅವರಿಗೆ ಜೈಲು ಶಿಕ್ಷೆ ಆಗಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ.
ಹೌದು, ನಟಿ ಮಾಡೆಲ್ ಸೋಪಿಯಾ ಹಯತ್, ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ತಿಳಿಸಿದ್ದಾಳೆ. ಈಕೆ ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿದ್ದ ಹಿಂದಿ ‘ಬಿಗ್ ಬಾಸ್’ ನಲ್ಲಿ ಸ್ಪರ್ಧಿ ಕೂಡ ಆಗಿದ್ದಳು. ಈಕೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ,’ಬಾಲಿವುಡ್ ನಲ್ಲಿ ಹಲವು ಜನ ಸಲ್ಮಾನ್ ಖಾನ್ ಅವರ ವಿರುದ್ಧ ಮಾತನಾಡಲು ಭಯ ಪಡ್ತಾರೆ. ಯಾಕಂದ್ರೆ, ಸಲ್ಮಾನ್ ಇಂಡಸ್ಟ್ರಿಯನ್ನ ನಿಯಂತ್ರಣ ಮಾಡ್ತಿದ್ದಾರೆ ಎಂಬ ಮಾತು. ಆದ್ರೆ, ನನಗೆ ಯಾವುದೇ ಭಯ, ಅಂಜಿಕೆ ಇಲ್ಲ. ಹೀಗಾಗಿ, ನಾನು ಮುಕ್ತವಾಗಿ ಸಲ್ಲು ಬಗ್ಗೆ ಮಾತನಾಡುತ್ತೇನೆ. ಸಲ್ಮಾನ್ ಖಾನ್ ಗೆ ಶಿಕ್ಷೆ ಆಗಿರುವುದು ನನಗೆ ತೀವ್ರ ಖುಷಿ ಕೊಟ್ಟಿದೆ’ ಎಂದು ತಿಳಿಸಿದ್ದಾರೆ.
ಹಾಗೇ ‘ಈ ಭೂಮಿಗೆ ಪ್ರಾಣಿಗಳು ಅತಿ ಮುಖ್ಯ. ಅವರನ್ನ ಅನೇಕ ಮಕ್ಕಳು ನೋಡುತ್ತಿರುತ್ತಾರೆ. ಯುವಜನಾಂಗ ಅವರನ್ನ ಅನುಕರಣೆ ಮಾಡುತ್ತಾರೆ. ಹೀಗಾಗಿ, ಸಲ್ಲು ಈ ರೀತಿ ಮಾಡಿದ್ರೆ, ಅದು ಸಮಾಜಕ್ಕೆ ಏನು ಸಂದೇಶ ನೀಡುತ್ತೆ.? ಅವರ ಅಭಿಮಾನಿಗಳಿಗೆ ಏನು ಸಂದೇಶ ನೀಡುತ್ತಿದ್ದಾರೆ.? ಕಾನೂನು ಉಲ್ಲಂಘಿಸುವುದು, ಪ್ರಾಣಿಗಳನ್ನ ಕೊಲ್ಲುವುದು. ಅವರು ಸೆಲೆಬ್ರಿಟಿ ಎಂಬ ಕಾರಣಕ್ಕೆ ಏನೇ ಮಾಡಿದ್ರು ಅದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ