ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ; ನಾಳೆಗೆ ತೀರ್ಪು ಕಾದಿರಿಸಿದ ಜೋಧಪುರದ ಸೆಷನ್ಸ್ ಕೋರ್ಟ್

ಶುಕ್ರವಾರ, 6 ಏಪ್ರಿಲ್ 2018 (11:40 IST)
ಜೋಧಪುರ : ಕೃಷ್ಣ ಮೃಗಗಳ ಭೇಟೆಯಾಡಿದ ಪ್ರಕರಣದಡಿ ದೋಷಿ ಎಂದು ಸಾಬೀತಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಈಗಾಗಲೇ ಜೈಲು ವಾಸ ಅನುಭವಿಸುತ್ತಿದ್ದು, ಅವರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ(ಇಂದು) ನಡೆದಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧಪುರ್ ನ್ಯಾಯಾಲಯ ನಟ ಸಲ್ಮಾನ್ ಖಾನ್ ಅವರಿಗೆ 5ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ವಿಧಿಸಿತ್ತು. ಈ ಕಾರಣದಿಂದ ಸಲ್ಮಾನ್ ಖಾನ್ ಪರ ವಕೀಲರು ಜಾಮೀನು ಕೋರಿ  ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಶುಕ್ರವಾರ(ಇಂದು) ಬೆಳಿಗ್ಗೆ  ಜೋಧಪುರದ ಸೆಷನ್ಸ್ ಕೋರ್ಟ್ ನಲ್ಲಿ  ನಡೆದಿದೆ. ವಾದ ಪ್ರತಿವಾದಗಳ ಬಳಿಕ ಇದೀಗ ವಿಚಾರಣೆ ನಡೆಸಿದ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರು ಇದಕ್ಕೆ ಸಂಬಂಧಪಟ್ಟ ತೀರ್ಪನ್ನು ಶನಿವಾರ(ನಾಳೆ) ಬೆಳಿಗ್ಗೆ 10.30ಕ್ಕೆ ಕಾದಿರಿಸಿದ್ದಾರೆ.  ಆದ ಕಾರಣ ಈವತ್ತು ಕೂಡ ನಟ ಸಲ್ಮಾನ್ ಖಾನ್ ಅವರು ಜೈಲಿನಲ್ಲೇ ಕಾಲಕಳೆಯಬೇಕಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ