ಮಲಯಾಳಂ ಫಿಲ್ಮ್ ಚೇಂಬರ್ ಸದಸ್ಯತ್ವಕ್ಕೆ ನಾಲ್ವರು ನಟಿಯರು ರಾಜೀನಾಮೆ ನೀಡಲು ಕಾರಣವೇನು?
ಶುಕ್ರವಾರ, 29 ಜೂನ್ 2018 (15:50 IST)
ಕೇರಳ : ಕ್ಯಾಸ್ಟಿಂಗ್ ಕೌಚ್ ವಿಚಾರವೊಂದಕ್ಕೆ ಸಂಬಂಧಿಸಿದಂತೆ 'ಮಲಯಾಳಂ ಕಲಾವಿದರ ಸಂಘ' ದಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನಲೆಯಲ್ಲಿ ಸಂಘದ ನಾಲ್ವರು ನಟಿ ಮಣಿಯರು ಮಲಯಾಳಂ ಫಿಲ್ಮ್ ಚೇಂಬರ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ನಟಿಯನ್ನ ಅಪಹರಣ ಮಾಡಿ, ದೌರ್ಜನ್ಯವೆಸೆಗಿರುವ ಆರೋಪದಲ್ಲಿ ಜೈಲು ಸೇರಿದ್ದ ನಟ ದಿಲೀಪ್ ಅವರನ್ನು 'ಅಮ್ಮ' ಸಂಘದಿಂದ ತೆಗೆದುಹಾಕಲಾಗಿತ್ತು. ಆದರೆ ಇದೀಗ ಜಾಮೀನು ಪಡೆದು ಬಿಡುಗಡೆಗೊಂಡಿರುವ ದಿಲೀಪ್ ಅವರನ್ನು ಫಿಲ್ಮ ಚೇಂಬರ್ನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ನಟ ಮೋಹನ್ ಲಾಲ್ ಅವರು ಮತ್ತೆ ಸಂಘಕ್ಕೆ ಸೇರಿಸಿಕೊಂಡಿದ್ದಾರೆ.
ಈ ಬಗ್ಗೆ ಅಸಮಾಧಾನಗೊಂಡಿರುವ ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಸನ್, ಗೀತು ಮೋಹನ್ ದಾಸ್ ಹಾಗೂ ದೌರ್ಜನ್ಯಕ್ಕೆ ಒಳಗಾಗಿದ್ದ ನಟಿಯೂ ಸೇರಿ ನಾಲ್ವರು ಸಂಘದ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುವುದರ ಮೂಲಕ ಮಾಲಿವುಡ್ ಫಿಲ್ಮ್ ಛೇಂಬರ್ ಗೆ ಗುಡ್ ಬೈ ಹೇಳಿದ್ದಾರೆ ಎಂದು ತಿಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ