ಶಾಸಕ ಸತೀಶ್ ಜಾರಕಿಹೋಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಅವರ ಬೆಂಬಲಿಗ 15 ಜನ ಜಿಲ್ಲಾ ಪಂಚಾಯತಿ ಸದಸ್ಯರು, 28 ಜನ ತಾಲೂಕು ಪಂಚಾಯತಿ ಸದಸ್ಯರು, ಎಪಿಎಂಸಿ ಅಧ್ಯಕ್ಷರು ಸೇರಿ 3ಜನ ಸದಸ್ಯರು ಹಾಗೂ ಇಬ್ಬರು ಪಾಲಿಕೆ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಕಾನೂನಾತ್ಮಕವಾಗಿ ಜಿಲ್ಲಾ ಪಂಚಾಯತಿ ಸಿಇಒ ಗೆ ಜಿ.ಪಂ, ತಾ.ಪಂ, ಗ್ರಾ ಪಂ ಸದಸ್ಯರು ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಆರೋಪಿಸಿದ ಜಾರಕಿಹೋಳಿ ಬೆಂಬಲಿಗರು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಉಸ್ತುವಾರಿ ವೇಣುಗೋಪಾಲ, ಮುಖಂಡ ಅಹ್ಮದ್ ಪಟೇಲ್ ಕುತಂತ್ರದಿಂದ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂದು ನೇರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದರು.