ಬಾಲಕಿಯ ಮುಖಕ್ಕೆ ಬಣ್ಣಹಚ್ಚಿ ತುಟಿಗೆ ಕಿಸ್ ಕೊಟ್ಟ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ವಿರುದ್ದ ದೂರು ದಾಖಲು

ಶನಿವಾರ, 24 ಫೆಬ್ರವರಿ 2018 (06:41 IST)
ನವದೆಹಲಿ : ಹಿಂದಿ ಗಾಯನ ರಿಯಾಲಿಟಿ ಶೋನ ಸ್ಪರ್ಧಿಗಳಲ್ಲೊಬ್ಬಳಾದ ಅಪ್ರಾಪ್ತ ಬಾಲಕಿಗೆ ಖ್ಯಾತ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ಅವರು ಕಿಸ್ ಕೊಟ್ಟಿರುವ ಕಾರಣದಿಂದ ಅವರ ವಿರುದ್ದ ದೂರು ದಾಖಲಾಗಿದೆ.


ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ಅದೇ ಶೋನ ಸ್ಪರ್ಧಿಯಾಗಿರುವ  ಅಪ್ರಾಪ್ತ ಬಾಲಕಿಯ ಮುಖಕ್ಕೆ ಬಣ್ಣ ಹಚ್ಚಿ ಆಕೆಯ ತುಟಿಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಸುಪ್ರೀಂ ಕೋರ್ಟ್ ವಕೀಲರೊಬ್ಬರು ಗಾಯಕನ ವಿರುದ್ದ ಪೋಕ್ಸೋ ಕಾಯ್ದೆ ಅಡಿ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.


ಪ್ಯಾಪೊನ್ ಯಾವುದೇ ರೀತಿಯ ಕೆಟ್ಟ ಭಾವನೆಯಿಂದ ಆ ರೀತಿ ಮಾಡಿಲ್ಲ, ಮಗುವಿನ ಬಗ್ಗೆ ಮಮತೆ ವ್ಯಕ್ತಪಡಿಸಿದ್ದಾರೆ ಅಷ್ಟೆ ಎಂದು ಶೋನ ಮ್ಯಾನೇಜರ್ ಸ್ಪಷ್ಟಪಡಿಸಿದ್ದರೂ ಕೂಡ ಗಾಯಕನ ಈ ರೀತಿಯಾದ ವರ್ತನೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ