ಬೆಂಗಳೂರಿನ : ನಟ ದರ್ಶನ್‌ಗೆ ಹೆಚ್ಚುವರಿ ಸೌಲಭ್ಯ ನೀಡುವ ಬಗೆಗಿನ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಇದೀಗ ಮುಂದೂಡಲಾಗಿದೆ.
ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಅವರ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಕನಿಷ್ಠ ಸೌಲಭ್ಯಗಳನ್ನು ನೀಡಿ ಎಂದು ಸೂಚಿಸಿದ್ದರು, ಜೈಲು ಅಧಿಕಾರಿಗಳು ಮಾತ್ರ ಯಾವುದೇ ಸೌಲಭ್ಯವನ್ನು ನೀಡಿಲ್ಲ.
10ನಿಮಿಷ ವಾಕಿಂಗ್ ಬಿಟ್ರೆ ಯಾವುದೇ ಸೌಲಭ್ಯವನ್ನು ಜೈಲು ಅಧಿಕಾರಿಗಳು ನೀಡಿಲ್ಲ. ಈ ಸಂಬಂಧ ದರ್ಶನ್ ಪರ ವಕೀಲಕರು ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಭಾಗಿಯಾಗಿದ್ದರು.
ಬ್ಲೂ ಜಾಕೆಟ್ ಧರಿಸಿ ದರ್ಶನ್, ಹಾಗೂ ಎ 1 ಆರೋಪಿ ಪವಿತ್ರಾ ಗೌಡ ಕೂಡಾ ವಿಡಿಯೋ ಈ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ.
ನಟ ದರ್ಶನ್‌ಗೆ ಹೆಚ್ಚುವರಿ ಸೌಲಭ್ಯ ನೀಡುವ ಬಗ್ಗೆ ವಿಚಾರಣೆ ಸಂಬಂಧ ಇದೀಗ ಸೆಪ್ಟೆಂಬರ್ 25ಕ್ಕೆ ವಿಚಾರಣೆ ಮುಂದೂಡಿಕೆ.