ಕಾಂತಾರ ಚಾಪ್ಟರ್ 1 ಶೂಟಿಂಗ್ ನ ಇದೊಂದು ಫೋಟೋ ವೈರಲ್ ಆಗ್ತಿದೆ

Krishnaveni K

ಶನಿವಾರ, 20 ಸೆಪ್ಟಂಬರ್ 2025 (09:51 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಶೂಟಿಂಗ್ ಸಂದರ್ಭದ ಇದೊಂದು ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಫೋಟೋದಲ್ಲಿ ರಿಷಬ್ ಶೆಟ್ಟಿಯವರನ್ನು ಪ್ರಗತಿ ಶೆಟ್ಟಿ ತಬ್ಬಿಕೊಂಡಿದ್ದಾರೆ.

ಕಾಂತಾರ ಚಾಪ್ಟರ್ 1 ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 22 ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಸಿನಿಮಾ ಬಗ್ಗೆ ಈಗ ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಇದರ ನಡುವೆ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ರ ಲುಕ್ ನಲ್ಲಿದ್ದರೆ ಅವರನ್ನು ಪತ್ನಿ ಪ್ರಗತಿ ಶೆಟ್ಟಿ ಭಾವುಕರಾಗಿ ತಬ್ಬಿಕೊಂಡಿದ್ದಾರೆ. ಕಾಂತಾರ ಚಾಪ್ಟರ್ 1 ರ ಸನ್ನಿವೇಶವೊಂದಕ್ಕಾಗಿ ರಿಷಬ್ ಶೆಟ್ಟಿ 24 ಗಂಟೆ ಎಡೆಬಿಡದೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರಂತೆ.

ಈ ಶೂಟಿಂಗ್ ಬಳಿಕ ರಿಷಬ್ ವೃತ್ತಿಪರತೆ ನೋಡಿ ಭಾವುಕರಾಗುವ ಪ್ರಗತಿ ತಬ್ಬಿಕೊಂಡರಂತೆ. ಇಂಥಾ ಗಂಡನ ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಪ್ರಗತಿ ಹೇಳಿಕೊಂಡಿದ್ದಾರೆ. ಈ ಹಿಂದೆ ಕಾಂತಾರ ಸಿನಿಮಾ  ಸನ್ನಿವೇಶದಲ್ಲಿ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣಕ್ಕಾಗಿ ರಿಷಬ್ ನಿಜಕ್ಕೂ ದೇಹ ಪೂರ್ತಿ ಗಾಯ ಮಾಡಿಕೊಂಡಿದ್ದರು ಎಂದು ಪ್ರಗತಿ ಹೇಳಿಕೊಂಡಿದ್ದರು. ಈಗಲೂ ರಿಷಬ್ ಅದೇ ಡೆಡಿಕೇಷನ್ ತೋರಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ