ಶ್ರೀದೇವಿ ಬಗ್ಗೆ ಹಾಗೇಕೆ ಹೇಳಿದೆ? ಬಾಹುಬಲಿ ನಿರ್ದೇಶಕ ರಾಜಮೌಳಿ ಸ್ಪಷ್ಟನೆ
‘ನಾನು ಸಾರ್ವಜನಿಕವಾಗಿ ಆಕೆ ಬಗ್ಗೆ ಹಾಗೆ ಹೇಳಿದ್ದಕ್ಕೆ ನನಗೆ ಬೇಸರವಿದೆ. ಹಾಗೆ ನಾನು ಹೇಳಬಾರದಿತ್ತು. ಅದನ್ನೀಗ ಮತ್ತಷ್ಟು ಚರ್ಚೆ ಮಾಡಿ ರಾಡಿಗೊಳಿಸುವುದು ಇಷ್ಟವಿಲ್ಲ. ಶ್ರೀದೇವಿ ಬಗ್ಗೆ ನನಗೆ ಅಪಾರ ಗೌರವವಿದೆ. ಆಕೆ ಭಾರತೀಯ ಸಿನಿಮಾಗಳ ಮುಂಚೂಣಿ ನಟಿ’ ಎಂದು ರಾಜಮೌಳಿ ಹೇಳಿದ್ದಾರೆ. ಈ ಮೂಲಕ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.