ಫೇವರೇಟ್‌ ಕಲರ್‌ನ ಬಟ್ಟೆ, ಲಿಪ್‌ಸ್ಟಿಕ್‌, ಕ್ಲಿಪ್‌ ಹಾಕಿ ಗ್ಲಾಮರ್‌ ಲುಕ್‌ನಲ್ಲೇ ಹೊರಟ ಪವಿತ್ರಾ

Sampriya

ಗುರುವಾರ, 14 ಆಗಸ್ಟ್ 2025 (16:19 IST)
Photo Credit X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಮಾಡೆಲ್‌ ಪವಿತ್ರಾ ಗೌಡ ಎರಡನೇ ಬಾರೀ ಜೈಲು ಸೇರಿದ್ದು, ಆದರೆ ತನ್ನ ಗ್ಲಾಮರ್‌ ಲುಕ್‌ನಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬಂಧನದ ಟೆನ್ಷನ್ ಮಧ್ಯೆಯೂ ಪವಿತ್ರಾ ಮಾತ್ರ ಮಿರ ಮಿರ ಮಿಂಚುತ್ತಲೇ ಜೈಲು ಸೇರಿದ್ದಾರೆ. 

ಮಾಡೆಲ್‌, ನಟಿಯಾಗಿದ್ದ ಪವಿತ್ರಾ ಗೌಡ್‌ಗೆ ಕೆಂಪು ಕಲರ್ ಎಂದರೆ ತುಂಬಾನೇ ಅಚ್ಚು ಮೆಚ್ಚು. ಅದಕ್ಕಾಗಿ ತನ್ನ ಹೊಸ ಉದ್ಯಮಕ್ಕೂ ರೆಡ್ ಕಾರ್ಪೇಟ್ ಎಂದು ಹೆಸರಿಟ್ಟು ಆರಂಭಿಸಿದ್ದಳು. 

ಇನ್ನೂ ಇಂದು ಜೈಲು ಸೇರುವಾಗಲೂ ಪವಿತ್ರಾ ತನ್ನ ನೆಚ್ಚಿನ ರೆಡ್ ಕಲರ್ ಕುರ್ತಾ, ಲಿಪ್‌ಸ್ಟಿಕ್‌, ಹೇರ್‌ ಕ್ಲಿಪ್ ಹಾಕಿ ಗ್ಲಾಮರ್‌ ಲುಕ್‌ನಲ್ಲೇ ಜೈಲು ಸೇರಲು ಹೊರಟಿದ್ದಾಳೆ. 

ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 7 ಆರೋಪಿಗಳಾದ ದರ್ಶನ್, ಪವಿತ್ರಾ ಮತ್ತು ಸಹ ಆರೋಪಿಗಳಾದ ನಾಗರಾಜು ಆರ್, ಅನು ಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಜಗದೀಶ್ ಅಲಿಯಾಸ್ ಜಗ್ಗ ಮತ್ತು ಪ್ರದೂಷ್ ಎಸ್ ರಾವ್ ಅಲಿಯಾಸ್ ಪ್ರದೂಷ್ ಅವರಿಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.

ಈ ಹಿನ್ನೆಲೆ ಇದೀಗ ಎಲ್ಲರ ಬಂಧನ ಪ್ರಕ್ರಿಯೆ ನಡೆಯುತ್ತಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ