Renukaswamy Case: ಎರಡನೇ ಭಾರೀ ಜೈಲು ಸೇರಿದ ದರ್ಶನ್‌

Sampriya

ಗುರುವಾರ, 14 ಆಗಸ್ಟ್ 2025 (16:46 IST)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿರುವ ಹಿನ್ನೆಲೆ ನಟ ದರ್ಶನ್‌ ಅವರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿಗೆ ಕುದುರೆ ಖರೀದಿಸಲು ಹೋಗಿದ್ದ ದರ್ಶನ್‌ಗೆ ಸುಪ್ರೀಂನಿಂದ ಬಿಗ್‌ ಶಾಕ್ ಎದುರಾಯಿತು. 

ತೀರ್ಪು ಹಿನ್ನೆಲೆ ಇತರ ಆರೋಪಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೇ ದರ್ಶನ್ ಬೆಂಗಳೂರು ಕಡೆ ಮುಖಮಾಡಿದ್ದರು. ಇದೀಗ ಪತ್ನಿಯ ಹೊಸಕೆರೆಹಳ್ಳಿಯಲ್ಲಿರುವ ಪ್ಲಾಟ್‌ನಲ್ಲಿ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ದರ್ಶನ್‌ ಬಂಧನಕ್ಕಾಗಿ ಪೊಲೀಸರ ಮೂರು ತಂಡ ದರ್ಶನ್ ಆರ್‌ ಆರ್‌ ಮನೆ, ಮೈಸೂರಿನ ಫಾರ್ಮ್‌ಹೌಸ್ ಹಾಗೂ ಪತ್ನಿ ವಿಜಯಲಕ್ಷ್ಮಿ ಪ್ಲಾಟ್‌ನಲ್ಲಿ ಕಾದು ಕುಳಿದಿತ್ತು. 

ಹಿಂದಿನಿಂದ ಗೇಟ್‌ನಿಂದ ಬಂದ ದರ್ಶನ್‌ರನ್ನು ಪೊಲೀಸರು ವಶಕ್ಕೆ ಪಡೆದು ಇದೀಗ ಪ್ರಾಥಮಿಕ ಮಾಹಿತಿ ದಾಖಲಿಸಿ, ನಂತರ ಮೆಡಿಕಲ್ ಚೆಕಪ್‌ಗೆ ಒಳಪಡಿಸಲಿದ್ದಾರೆ. 

‌2024ರ ಜೂನ್‌ನಲ್ಲಿ ಚಿತ್ರದುರ್ಗದಲ್ಲಿ ನಡೆದಿದ್ದ ರೇಣುಕಾಸ್ವಮಯ್‌ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದರ್ಶನ್‌, ಪವಿತ್ರಾ ಮತ್ತು ಇತರ 15 ಮಂದಿಗೆ ಕಳೆದ ವರ್ಷ ಜಾಮೀನು ಮಂಜೂರಾಗಿತ್ತು.

ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿಶೇಷ ರಜೆ ಅರ್ಜಿ ಸಲ್ಲಿಸಿತ್ತು. ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಇಂದು ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ