'ಯೇ ದಿಲ್ ಹೇ ಮುಷ್ಕಿಲ್' ಫಸ್ಟ್ ರಿಲೀಸ್ ಆಗಲಿ ಅನ್ನೋದು ರಣಬೀರ್ ಆಸೆಯಂತೆ

ಸೋಮವಾರ, 27 ಜೂನ್ 2016 (17:12 IST)
'ಯೇ ದಿಲ್ ಹೇ ಮುಷ್ಕಿಲ್' ಚಿತ್ರಕ್ಕೂ ಮೊದಲು ಜಗ್ಗಾ ಜಾಸೂಸ್ ಚಿತ್ರ ರಿಲೀಸ್ ಆಗಲಿ ಎಂಬುದು ರಣಬೀರ್ ಕಪೂರ್ ಆಸೆ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಕಳೆದ ಹಿಂದೆ ತೆರೆ ಕಂಡಿದ್ದ ರಣಬೀರ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ. ಆದ್ದರಿಂದ ಏ ದಿಲ್ ಹೇ ಮುಷ್ಕಿಲ್ ಚಿತ್ರಕ್ಕಾಗಿ ರಣಬೀರ್ ತುಂಬಾ ಎಕ್ಸೈಟ್ ಆಗಿದ್ದಾರಂತೆ.


ಆದ್ದರಿಂದ ಜಗ್ಗಾ ಜಾಸೂಸ್ ಚಿತ್ರದ ಬಳಿಕ ರಿಲೀಸ್ ಕಾಣಲಿ ಎಂದು ಅವರು ಅಂದು ಕೊಂಡಿದ್ದಾರಂತೆ. ಆದ ಕಾರಣ ರಾಕ್ ಸ್ಟಾರ್ ಆ್ಯಕ್ಟರ್ ಜಗ್ಗಾ ಜಾಸೂಸ್ ಚಿತ್ರವನ್ನು ಜನೆವರಿ 2017ಕ್ಕೆ ರಿಲೀಸ್ ಮಾಡಲು ಪ್ರಯತ್ನ ಪಡುತ್ತಿದ್ದಾರಂತೆ. 
 
ಕರಣ್ ಜೋಹರ್ ನಿರ್ದೇಶನ ಮಾಡಿದ್ದಾರೆ. ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಐಶ್ವರ್ಯ ರೈ, ಅನುಷ್ಕಾ ಶರ್ಮಾ ಹಾಗೂ ಫವದ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಂಬರ್ 28ಕ್ಕೆ ಚಿತ್ರಮಂದಿರದಲ್ಲಿ ಚಿತ್ರ ತೆರೆ ಕಾಣಲಿದೆ.

ಜಗ್ಗ ಜಾಸೂಸ್' ಸಿನಿಮಾ ಈಗಾಗಲೇ ಬಾಲಿವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಪರಸ್ಪರ ದೂರವಾದ ಬಳಿಕ ಕ್ಯಾಟ್ ಹಾಗೂ ರಣ್ ಬೀರ್ ಕಪೂರ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಸಿನಿಮಾವಾಗಿರೋದ್ರಿಂದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ