ತನುಶ್ರೀ ಬೆಂಬಲಕ್ಕೆ ನಿಂತ ಮಹಿಳಾ ಆಯೋಗ; ನಾನಾಪಾಟೇಕರ್ ಗೆ ನೋಟಿಸ್ ಜಾರಿ

ಗುರುವಾರ, 11 ಅಕ್ಟೋಬರ್ 2018 (08:13 IST)
ಮುಂಬೈ : ಇತ್ತೀಚೆಗೆ ನಟ ನಾನಾ ಪಾಟೀಕರ್ ವಿರುದ್ಧ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದೀಗ ನಾನಾ ಪಾಟೇಕರ್ ವಿರುದ್ಧ ಮಹರಾಷ್ಟ್ರ ಮಹಿಳಾ ಆಯೋಗ ನೋಟೀಸ್ ನೀಡಿದೆ.

10ವರ್ಷಗಳ ಹಿಂದೆ ನಾನಾ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಅಂತಾ ತನುಶ್ರೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.  ಇದಕ್ಕೆ ಕೆಲವು ನಟಿಯರು ತನುಶ್ರೀ ದತ್ತ ಅವರಿಗೆ  ಬೆಂಬಲ ಸೂಚಿಸಿದ್ದರು. ಇದೀಗ ಮಹರಾಷ್ಟ್ರ ಮಹಿಳಾ ಆಯೋಗ ಕೂಡ ತನುಶ್ರೀ ದತ್ತ ಬೆಂಬಲಕ್ಕೆ ನಿಂತಿದೆ.

 

ಹೌದು. ಇದೀಗ ಮಹರಾಷ್ಟ್ರ ಮಹಿಳಾ ಆಯೋಗ 10 ದಿನಗಳಲ್ಲಿ ಈ ಆರೋಪದ ಬಗ್ಗೆ ನಾನಾ ಪಾಟೇಕರ್  ಉತ್ತರ ನೀಡಬೇಕೆಂದು ನೋಟೀಸ್ ನೀಡಿದೆ. ಹಾಗೇ ರಾಕೇಶ್ ಸಾರಂಗ್, ಗಣೇಶ ಆಚಾರ್ಯ ಅವರು ಕೂಡ ಈ ಬಗ್ಗೆ ಉತ್ತರಿಸಬೇಕೆಂದು ನೋಟಿಸ್ ಜಾರಿ ಮಾಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ