ಮಹೋಬಾತ್ಬಿ ಅಡಮ್ ಮುಲ್ಲಾ ಮಗುವನ್ನು ಕೊಂದ ಆರೋಪಿ. ಮಹೋಬಾತ್ಬಿ ಅಡಮ್ ಮುಲ್ಲಾ ಮತ್ತು ಆಕೆಯ ಮಗ ಶಬ್ಬೀರ್ ಕೂಲಿಕಾರರಾಗಿದ್ದರು. ಈ ನಡುವೆ ಶಬ್ಬೀರ್ ಮಗು ಹುಟ್ಟಿದಾಗಿನಿಂದ ಅನಾರೋಗ್ಯದಿಂದ ಬಳಲುತಿದ್ದು, ಎರಡು ತಿಂಗಳ ಕಾಲ ಮಗುವನ್ನು ಸಿಪಿಆರ್ ಸಿವಿಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಎರಡು ತಿಂಗಳ ಬಳಿಕ ಆಸ್ಪತ್ರೆಯಿಂದ ಕರೆತಂದಾಗ ಮಗು 1,600 ಗ್ರಾಂ ತೂಕವನ್ನು ಇತ್ತು. ಆದ್ದರಿಂದ ಮಗಳನ್ನು ನೋಡಿಕೊಳ್ಳಲು ಶಬ್ಬೀರ್ ತನ್ನ ಕೆಲಸವನ್ನು ಬಿಡಬೇಕಾಯಿತು. ಆಗ ಇಡೀ ಕುಟುಂಬದ ಜವಬ್ದಾರಿ ಮಹೋಬಾತ್ಬಿ ಮೇಲೆ ಬಿದ್ದಿದೆ.
ಅಲ್ಲದೇ ಮಗುವಿನ ಆರೋಗ್ಯ ಸುಧಾರಿಸಲು ಹಾಲಿನ ಪುಡಿ ಮತ್ತು ಇತರ ಔಷಧಿಗಳನ್ನು ಖರೀದಿಸಬೇಕಿತ್ತು. ಇದರಿಂದ ಬೇಸರಗೊಂಡ ಮಹೋಬಾತ್ಬಿ ಮಗುವಿನ ಜನನದಿಂದಲೇ ನಾವು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಭಾವಿಸಿ ಕಂದಮ್ಮನನ್ನುಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಕುತ್ತಿಗೆಯ ಭಾಗದಲ್ಲಿ ಗುರುತುಗಳು ಕಾಣಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ರಾಜರಾಂಪುರಿ ಪೊಲೀಸರು ತನಿಖೆ ನಡೆಸಿದಾಗ ಮಹೋಬಾತ್ಬಿಯ ನಡವಳಿಕೆಯಿಂದ ಅನುಮಾನಗೊಂಡು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಈ ಕೃತ್ಯ ಎಸಗಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಇದೀಗ ಆಕೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಒಪ್ಪಿಸಲಾಗಿದ್ದು ಆರೋಪಿಯನ್ನು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.