ವೈ.ಎಸ್. ರಾಜಶೇಖರ್ ರೆಡ್ಡಿ ಪತ್ನಿಯಾಗಲು ಒಪ್ಪಿಕೊಂಡ ನಟಿ ರಮ್ಯಾಕೃಷ್ಣ

ಭಾನುವಾರ, 22 ಏಪ್ರಿಲ್ 2018 (06:16 IST)
ಹೈದರಾಬಾದ್ : ಪಂಚಭಾಷಾ ನಟಿ ರಮ್ಯಾಕೃಷ್ಣ ಅವರು ಇದೀಗ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಪತ್ನಿಯಾಗಲು ಒಪ್ಪಿಕೊಂಡಿದ್ದಾರೆ.


ಹೌದು. ನಟಿ ರಮ್ಯಾಕೃಷ್ಣ ಅವರು  ವೈ ಎಸ್ ರಾಜಶೇಖರ್ ರೆಡ್ಡಿ ಅವರ ಜೀವನಚರಿತ್ರೆಯನ್ನಾಧಾರಿತ ಚಿತ್ರದಲ್ಲಿ ವೈ ಎಸ್ ಆರ್ ಅವರ ಪತ್ನಿ ವಿಜಯಮ್ಮ ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ಮೊದಲು ವೈ ಎಸ್ ಆರ್ ಪತ್ನಿಯಾಗಿ ನಯನತಾರ ಅಭಿನಯಿಸುವುದು ಎನ್ನಲಾಗಿತ್ತು. ಆದರೆ ನಯನತಾರ  ಈ ಪಾತ್ರವನ್ನು ತಿರಸ್ಕರಿಸಿದ ಕಾರಣ ಇದಕ್ಕೆ ರಮ್ಯಾಕೃಷ್ಣ ಅವರನ್ನು ಆಯ್ಕೆಮಾಡಲಾಗಿದೆ. ವೈ ಎಸ್ ರಾಜಶೇಖರ್ ರೆಡ್ಡಿ ಅವರ ಪಾತ್ರವನ್ನು ಮಮ್ಮುಟ್ಟಿ ನಿರ್ವಹಿಸಲಿದ್ದು, ಚಿತ್ರತಂಡ ಇದೀಗ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಗೊಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ